Advertisement

ಪಿಎಂ ಮೋದಿಗೆ ವಿಶ್ವಸಂಸ್ಥೆ ಪರಿ ಸರ ಪ್ರಶಸ್ತಿ ಪ್ರದಾನ

07:55 AM Oct 04, 2018 | Team Udayavani |

ಹೊಸದಿಲ್ಲಿ: ವಿಶ್ವಸಂಸ್ಥೆಯ ಅತ್ಯುನ್ನತ ಗೌರವವಾದ ಚಾಂಪಿಯನ್ಸ್‌ ಆಫ್ ದಿ ಅರ್ಥ್ ಪುರಸ್ಕಾರವನ್ನು ಪ್ರಧಾನಿ ನರೇಂದ್ರ ಮೋದಿಗೆ ಹೊಸದಿಲ್ಲಿಯಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್‌ ಪ್ರದಾನ ಮಾಡಿದ್ದಾರೆ. ಪ್ರಧಾನಿ ಮೋದಿ ಹಾಗೂ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಎಲ್‌ ಮ್ಯಾಕ್ರನ್‌ಗೆ ಜಂಟಿಯಾಗಿ ಈ ಪುರಸ್ಕಾರ ನೀಡಲಾಗಿದೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟವನ್ನು ರಚಿಸಿದ್ದಕ್ಕಾಗಿ ಹಾಗೂ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಸಹಕಾರಕ್ಕೆ ಹೊಸ ಅವಕಾಶವನ್ನು ಒದಗಿಸಿದ್ದಕ್ಕೆ ಪ್ರಧಾನಿ ಮೋದಿಗೆ ಈ ಪುರಸ್ಕಾರ ನೀಡಲಾಗಿದೆ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಪ್ರಕಟಿಸಿದ ಹೇಳಿಕೆಯಲ್ಲಿ ವಿವರಿಸಿದೆ.

Advertisement

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋದಿ, ನಿಸರ್ಗ ಮತ್ತು ವಿಪತ್ತುಗಳೆರಡೂ ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿವೆ. ಪರಿಸರದ ಬಗೆಗಿನ ಕಾಳಜಿಯು ಸಂಸ್ಕೃತಿಯ ಭಾಗವಾಗದ ಹೊರತು ವಿಪತ್ತನ್ನು ನಾವು ದೂರವಿಡಲಾಗದು ಎಂದಿದ್ದಾರೆ. ಕೃಷಿ, ಔದ್ಯಮಿಕ ನೀತಿಗಳು, ಮನೆ ನಿರ್ಮಾಣ ಹಾಗೂ ಶೌಚಾಲಯ ನಿರ್ಮಾಣ ಸೇರಿದಂತೆ ಪ್ರತಿ ಹಂತದಲ್ಲೂ ನಮ್ಮ ಸರಕಾರವು ಪರಿಸರ ಸ್ನೇಹಿ ಕ್ರಮಗಳಿಗೆ ಒತ್ತು ನೀಡಿದೆ.

ಏನಿದು ಚಾಂಪಿಯನ್ಸ್‌ ಆಫ್ ದಿ ಅರ್ಥ್ ಅವಾರ್ಡ್‌?
ಇದು ವಿಶ್ವಸಂಸ್ಥೆಯ ಅತ್ಯುನ್ನತ ಗೌರವ. ತಮ್ಮ ಕ್ರಮಗಳಿಂದಾಗಿ ಪರಿಸರದ ಮೇಲೆ ಗಮನಾರ್ಹ ಪರಿಣಾಮ ಬೀರುವ ವ್ಯಕ್ತಿಗಳಿಗೆ ಈ ಪುರಸ್ಕಾರ ನೀಡಲಾಗುತ್ತದೆ. 2005ರಲ್ಲಿ ಆರಂಭಿಸಿದ ಈ ಪುರಸ್ಕಾರವನ್ನು ವಿಶ್ವದ ವಿವಿಧ ಗಣ್ಯರಿಗೆ ನೀಡಲಾಗಿದೆ. ಈ ಹಿಂದೆ ಯುನಿಲಿವರ್‌ ಸಿಇಒ ಪಾಲ್‌ ಪಾಲ್ಮನ್‌, ರವಾಂಡಾ ಅಧ್ಯಕ್ಷ ಪಾಲ್‌ ಕಗಾಮೆ, ಪರಿಸರ ಪ್ರೇಮಿ ಸಿಲ್ವಿಯಾ ಅರ್ಲೆ ಸೇರಿದಂತೆ ಹಲವರಿಗೆ ನೀಡಲಾಗಿದೆ.

ಮೋದಿಗೆ ಪ್ರಶಸ್ತಿ ನೀಡಿದ್ದು ಯಾಕೆ?
– 121 ದೇಶಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ಸೌರ ಒಕ್ಕೂಟ (ಐಎಸ್‌ಎ) ರಚನೆ ಮಾಡಿರುವುದು.

– ಪ್ಲಾಸ್ಟಿಕ್‌ ಬಳಕೆಯನ್ನು 2022ರ ವೇಳೆಗೆ ದೇಶದಿಂದ ನಿರ್ಮೂಲನೆ ಮಾಡುವ ಗುರಿ ಹಾಕಿಕೊಂಡಿರುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next