Advertisement

ವಿಶ್ವ ಆರ್ಥಿಕ ಶೃಂಗಸಭೆ; ದಾವೋಸ್ ನಲ್ಲಿ ಮೋದಿಗೆ ಹಿಮಪಾತದ ಸ್ವಾಗತ!

06:28 PM Jan 22, 2018 | Team Udayavani |

ನವದೆಹಲಿ: ಸ್ವಿಜರ್ಲೆಂಡ್ ನ ದಾವೋಸ್ ನಲ್ಲಿ ಆರಂಭವಾಗಲಿರುವ ವಿಶ್ವ ಆರ್ಥಿಕ ವೇದಿಕೆಯ 48ನೇ ವಾರ್ಷಿಕ ಸಮ್ಮೇಳನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದಾವೋಸ್ ಗೆ ಬಂದಿಳಿದಿದ್ದು, ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಜಾನೆ ನವದೆಹಲಿಯಿಂದ ಸ್ವಿಜರ್ಲೆಂಡ್ ನತ್ತ ಹೊರಟಿದ್ದರು. ದಾವೋಸ್ ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾರತದ ಮುಂದಿನ ದೃಷ್ಟಿಕೋನ ಹಾಗೂ ಕುಸಿಯುತ್ತಿರುವ ಜಾಗತಿಕ ಆರ್ಥಿಕತೆಯನ್ನು ಉತ್ತೇಜಿಸುವ ಬಗ್ಗೆ ಮೋದಿ ಭಾಷಣ ಮಾಡಲಿದ್ದಾರೆ.

ಅಂತಾರಾಷ್ಟ್ರೀಯ ಪ್ರತಿನಿಧಿಗಳ ಜೊತೆ ಭವಿಷ್ಯದ ಭಾರತದ ಕುರಿತು ವಿಷಯವನ್ನು ಹಂಚಿಕೊಳ್ಳಲಿದ್ದೇನೆ ಎಂದು ದಾವೋಸ್ ನಲ್ಲಿ ಪ್ರಧಾನಿ ಮೋದಿ ತಿಳಿಸಿರುವುದಾಗಿ ಮಾಧ್ಯಮದ ವರದಿ ಹೇಳಿದೆ.

ಮಂಗಳವಾರ ವಿವಿಧ ದೇಶಗಳ ಸಿಇಒಗಳ ಜತೆಗಿನ ದುಂಡು ಮೇಜಿನ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದ ನಡೆಸಲಿದ್ದಾರೆ. 18 ದೇಶಗಳ 40 ಸಿಇಒಗಳ ಜತೆ ಸಂವಾದ ನಡೆಸಲಿದ್ದಾರೆ.

ದಾವೋಸ್ ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಂಜಿನ ಸ್ವಾಗತ ದೊರೆತಿದೆ. ಹೌದು ದಾವೋಸ್ ನಲ್ಲಿ ಭಾರೀ ಹಿಮಪಾತವಾಗುತ್ತಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next