Advertisement

ಎಲೆಕ್ಟ್ರಿಕ್‌ ವಾಹನಕ್ಕೆ ಪ್ರತ್ಯೇಕ ನೀತಿ

06:00 AM Sep 08, 2018 | |

ನವದೆಹಲಿ: ದೇಶದ ಸಾರಿಗೆ ನೀತಿಯಲ್ಲಿ ಮಹತ್ವದ ಬದಲಾವಣೆ ಮುನ್ಸೂಚನೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದು, ಶೀಘ್ರದಲ್ಲೇ ಎಲೆಕ್ಟ್ರಿಕ್‌ ವಾಹನಗಳಿಗೆ ಸಂಬಂಧಿಸಿದಂತೆ ನೀತಿ ರೂಪಿಸಲಾಗುತ್ತದೆ ಎಂದಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಜಾಗತಿಕ ಸಾರಿಗೆ ಸಮ್ಮೇಳನ ಮೂವ್‌ ಉದ್ದೇಶಿಸಿ ಮಾತನಾಡಿದ ಮೋದಿ, ಹವಾಮಾನ ವೈಪರೀತ್ಯದ ವಿರುದ್ಧ ನಮ್ಮ ಹೋರಾಟದಲ್ಲಿ ಶುದ್ಧ ಇಂಧನ ಬಳಸಿ ಸ್ವತ್ಛ ಸಾರಿಗೆ ಸೌಲಭ್ಯ ಒದಗಿಸುವುದೇ ಆದ್ಯತೆಯದ್ದಾಗಿದೆ. ಇದರಿಂದಾಗಿ ನಮ್ಮ ಜನರ ಜೀವನ ಮಟ್ಟವೂ ಸುಧಾರಿಸಲಿದೆ. ಇದಕ್ಕಾಗಿ ಸಾರ್ವಜನಿಕ ಸಾರಿಗೆಗೆ ಒತ್ತು ನೀಡಬೇಕಿದೆ ಎಂದಿದ್ದಾರೆ.

Advertisement

ನಮ್ಮ ಆರ್ಥಿಕತೆ ವೃದ್ಧಿಸುತ್ತಿದೆ. ಅದಕ್ಕೆ ಅನುಗುಣವಾಗಿ ನಾವು ಕ್ಲೀನ್‌ ಕಿಲೋಮೀಟರ್‌ ಎಂಬ ಕಲ್ಪನೆಯನ್ನು ಹುಟ್ಟುಹಾಕುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ. ನೀತಿ ಆಯೋಗ ಇದೇ ಮೊದಲ ಬಾರಿಗೆ ಜಾಗತಿಕ ಸಾರಿಗೆ ಸಮ್ಮೇಳನವನ್ನು ನಡೆಸುತ್ತಿದ್ದು, ಸಾರಿಗೆ ವಲಯದಲ್ಲಿ ಮಾಲಿನ್ಯ ನಿರ್ಮೂಲನೆ ಕುರಿತ ಚರ್ಚೆಯೇ ಇದರ ಪ್ರಮುಖ ಆದ್ಯತೆಯಾಗಿದೆ. ಅಲ್ಲದೆ ಮುಂದಿನ ಐದು ವರ್ಷಗಳಲ್ಲಿ ಶೇ. 15ರಷ್ಟು ಎಲೆಕ್ಟ್ರಿಕ್‌ ವಾಹನ ಮಾರಾಟ ಹೆಚ್ಚಳ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಕಳೆದ ವರ್ಷ ಕೇವಲ 2 ಸಾವಿರ ಎಲೆಕ್ಟ್ರಿಕ್‌ ವಾಹನಗಳ ಮಾರಾಟವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next