Advertisement

ಐಎನ್‌ಎಸ್‌ ಅರಿಹಂತ್‌ ಪ್ರಥಮ ಗಸ್ತು ಯಶಸ್ವಿ : ಪ್ರಧಾನಿ ಮೋದಿ ಶ್ಲಾಘನೆ

04:44 PM Nov 05, 2018 | Team Udayavani |

ಹೊಸದಿಲ್ಲಿ : ಭಾರತದ ಪರಮಾಣು ಚಾಲಿತ ಬ್ಯಾಲಿಸ್ಟಿಕ್‌ ಮಿಸೈಲ್‌ ಸಬ್‌ಮರೀನ್‌ ಐಎಎನ್‌ಎಸ್‌ ಅರಿಹಂತ್‌ ತನ್ನ ಪ್ರಥಮ ಭೀತಿಕಾರಕ ಗಸ್ತನ್ನು (deterrence patrol) ಯಶಸ್ವಿಯಾಗಿ ಪೂರೈಸಿದೆ. 

Advertisement

ಐಎನ್‌ಎಸ್‌ ಅರಿಹಂತ್‌ ನ ಈ ಯಶಸ್ಸು ದೇಶದ ಭದ್ರತೆಯನ್ನು ಬಲಪಡಿಸುವಲ್ಲಿನ ಮಹತ್ತರ ಹೆಜ್ಜೆಯಾಗಿದೆ; ದೇಶದ ಶತ್ರುಗಳಿಗೆ ಇದೊಂದು ಬಹಿರಂಗ ಸವಾಲಾಗಿದೆ’ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೊಂದು ಮಹತ್ತರ ಮೈಲುಗಲ್ಲೆಂದು ವರ್ಣಿಸಿದ್ದಾರೆ.

ಐಎನ್‌ಎಸ್‌ ಅರಿಹಂತ್‌ ತನ್ನ ಮೊತ್ತ ಮೊದಲ ಭೀತಿಕಾರಕ ಗಸ್ತನ್ನು ಯಶಸ್ವಿಯಾಗಿ ಮುಗಿಸಿ ಬರುವ ಮೂಲಕ ದೇಶದ ತ್ರಿವಿಧ ಪರಮಾಣು ದಾಳಿ ಸಾಮರ್ಥ್ಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು “ಐಎಎನ್‌ಎಸ್‌ ಯಶಸ್ಸು ದೇಶದ ಭದ್ರತೆಯಲ್ಲಿ ಸಾಧಿಸಲ್ಪಟ್ಟಿರುವ ಮಹತ್ತರ ಮೈಲುಗಲ್ಲು’ ಎಂದು ವರ್ಣಿಸಿದರು. 

ದೀಪಾವಳಿಗೆ ಮುನ್ನ ಭಾರತೀಯ ನೌಕಾಪಡೆ ದಾಖಲಿಸಿದ ಈ ಸಾಧನೆಯನ್ನು ಧನ್‌ತೇರಾ ಸ್ಪೆಶಲ್‌ ಎಂದು ವರ್ಣಿಸಿರುವ ಪ್ರಧಾನಿ ಮೋದಿ, “ಇದು ಭಾರತದ ಹೆಮ್ಮೆ, ಇದರ ಯಶಸ್ಸಿಗೆ ಕಾರಣರಾದವರಿಗೆಲ್ಲ ನನ್ನ ಅಭಿನಂದನೆಗಳು; ಇತಿಹಾಸದಲ್ಲಿ ಇದು ಸದಾ ಸ್ಮರಣೀಯವಾಗಿರುತ್ತದೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next