ಬೋಗಿ ಬಿಲ್: ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಿರುವ ದೇಶದ ಅತೀ ಉದ್ದದ ಬೋಗಿಬಿಲ್ ರಸ್ತೆ ಮತ್ತು ರೈಲು ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇಶಕ್ಕೆ ಸಮರ್ಪಿಸಿದ್ದಾರೆ. ಇದು ಏಷ್ಯಾದಲ್ಲೇ 2 ನೇ ಉದ್ದದ ಸೇತುವೆ.
ಬೃಹತ್ ಸೇತುವೆಗೆ 1997 ರ ಜನವರಿ 22 ರಂದು ಅಂದಿನ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸೇತುವೆ ಕಾಮಗಾರಿಗೆ ಶಿಲಾನ್ಯಾಸ ಮಾಡಿದ್ದರು. 2002 ರಲ್ಲಿ ಆಗಿನ ಪ್ರಧಾನ ಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು. 16 ವರ್ಷಗಳ ಕಾಮಗಾರಿ ಬಳಿಕ ಸೇತುವೆ ಉದ್ಘಾಟನೆಗೊಂಡಿದೆ.
4.9 ಕಿ.ಮೀ ಉದ್ದದ ಸೇತುವೆ ಅಸ್ಸಾಂನಿಂದ ಅರುಣಾಚಲ ಪ್ರದೇಶನ ನೆಹರ್‌ಲಗೂನ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತಿದೆ. ಸೇತುವೆ 2 ಲೇನ್‌ಗಳ ರೈಲ್ವೇ ಟ್ರ್ಯಾಕ್ ಮತ್ತು 3ಲೇನ್‌ಗಳು ರಸ್ತೆ ಒಳಗೊಂಡಿದೆ.
ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾದ ಈ ಸೇತುವೆಯಲ್ಲಿ ಯುದ್ಧ ವಿಮಾನಗಳನ್ನು ಇಳಿಸಬಹುದಾಗಿದೆ ಮಾತ್ರವಲ್ಲದೆ ಯುದ್ಧ ಟ್ಯಾಂಕ್‌ಗಳೂ ಸಂಚರಿಸಬಹುದಾಗಿದೆ.