ಹೈದರಾಬಾದ್: ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್‌ರವರ ಜನ್ಮಶತಾಬ್ದಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ನ ಹಿರಿಯ ಮುತ್ಸದ್ದಿಯಾಗಿದ್ದ ರಾವ್ ಅವರನ್ನು ಮನಸಾರೆ ಹಾಡಿ ಹೊಗಳಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, “”ದೇಶದ ಪ್ರಗತಿಗೆ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ನೀಡಿದ ಕಾಣಿಕೆಯನ್ನು ಈ ದೇಶ ಸದಾ ಸ್ಮರಿಸುತ್ತದೆ. ಅವರಲ್ಲಿದ್ದ ಜ್ಞಾನ ಹಾಗೂ ನೈಪುಣ್ಯತೆ ಅನನ್ಯವಾದದ್ದು” ಎಂದು ಮೋದಿ ಶ್ಲಾ ಸಿದ್ದಾರೆ. ಇದರ ಜೊತೆಯಲ್ಲೇ, ಕಳೆದ ವರ್ಷ ಮನ್ ಕೀ ಬಾತ್‌ನಲ್ಲಿ ಇದೇ ದಿನ ತಾವು ಪಿ.ವಿ. ನರಸಿಂಹ ರಾವ್ ಅವರನ್ನು ನೆನಪಿಸಿಕೊಂಡಿದ್ದ ಮಾತಿನ ತುಣುಕನ್ನು ಕೂಡ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಡಾ. ಸಿಂಗ್ ನಮನ
ಪಿವಿಎನ್ ಅವರ 100ನೇ ಹುಟ್ಟುಹಬ್ಬದ ಪ್ರಯುಕ್ತ ತೆಲಂಗಾಣ ಕಾಂಗ್ರೆಸ್ ಆಯೋಜಿಸಿದ್ದ ವಚ್ಯುìವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, “”ಭಾರತ ಕಂಡ ಅಪರೂಪದ ಆಡಳಿತಗಾರ ಹಾಗೂ ರಾಜತಂತ್ರಜ್ಞರಾಗಿದ್ದ ಪಿ.ವಿ.ಎನ್, ಆರ್ಥಿಕತೆ ಹಾಗೂ ರಾಜತಾಂತ್ರಿಕತೆಗೆ ಸಂಬಂಧಿಸಿದಂತೆ ಹೊಸ ನೀತಿಗಳನ್ನು ಜಾರಿಗೆ ತಂದರು” ಎಂದು ತಿಳಿಸಿದರು.
ಇದನ್ನೂ ಓದಿ :2025ರೊಳಗೆ ಟಾಟಾ ಸಂಸ್ಥೆಯಿಂದ 10 ಹೊಸ ವಿದ್ಯುತ್ ಚಾಲಿತ ಕಾರುಗಳ ಬಿಡುಗಡೆ
ಅವಿವಾದಿತ ದೀಪಧಾರಿ: ನಾಯ್ಡು
ಪಿವಿಎನ್‌ಗೆ ಟ್ವಿಟರ್‌ನಲ್ಲಿ ಗೌರವ ಸಲ್ಲಿಸಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, “”ಅತ್ಯುತ್ತಮ ಆಡಳಿತಗಾರರಾಗಿ, ರಾಜತಾಂತ್ರಿಕರಾಗಿ, ದೂರದೃಷ್ಟಿಯುಳ್ಳವರಾಗಿದ್ದ ಅವರು ದೇಶವನ್ನು ಪ್ರಗತಿಯೆಡೆಗೆ ಕೊಂಡೊಯ್ದ ಅವಿವಾದಿತ ದೀಪಧಾರಿ” ಎಂದು ತಿಳಿಸಿದ್ದಾರೆ.