Advertisement
ಆಕಾಶವಾಣಿಯ ಮನ್ ಕೀ ಬಾತ್ ಸರಣಿಯಲ್ಲಿ ಪ್ರಧಾನಿ ಮಾತನಾಡಿ,ಕೊರೊನಾ ಕಾಲಘಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರು ಬಾಕಾಹುವಿನಿಂದಾಗಿ ಆದಾಯ ಹೆಚ್ಚಿಸಿಕೊಂಡು ಸ್ವಾವಲಂಬಿ ಜೀವನಕ್ಕೆ ಹೊಸ ದಾರಿ ಕಂಡುಕೊಂಡಿರುವ ಬಗ್ಗೆ ಮೆಚ್ಚುಗೆ ಸೂಚಿಸಿದರು.
Related Articles
Advertisement
“ಬಾಕಾಹು’ ಎಂದರೆ ಬಾಳೆಕಾಯಿ ಹುಡಿ ಎಂದರ್ಥ. ಈ ಹುಡಿ ವಿವಿಧ ಖಾದ್ಯ ರೂಪದಲ್ಲಿ ಅಡುಗೆ ಮನೆ ಪ್ರವೇಶಿಸಿದ್ದು, ಆರೋಗ್ಯ ಮತ್ತು ಆದಾಯದ ದೃಷ್ಟಿಯಿಂದ ಜನಮನ್ನಣೆ ಪಡೆಯುತಿದ್ದು ಕಿರು ಉದ್ಯಮ ಸ್ವರೂಪವನ್ನು ಪಡೆಯುತ್ತಿದೆ. ಗೋಧಿ, ಮೈದಾಕ್ಕೆ ಪರ್ಯಾಯ ಹಲವು ವಿಟಮಿನ್, ಮೆಗ್ನಿಶಿಯಂ, ಪೊಟಾಶಿಯಂನಂತಹ ಸತ್ವಭರಿತ ಪೋಷಕಾಂಶಗಳಿಂದ ಕೂಡಿದ ಬಾಕಾಹುವನ್ನು ಗೋಧಿ ಪುಡಿ ಮತ್ತು ಮೈದಾ ಹಿಟ್ಟಿಗೆ ಪರ್ಯಾಯವಾಗಿ ಬಳಸಬಹುದಾಗಿದೆ.
ತಯಾರಿ ಹೇಗೆ?
ಬಾಕಾಹು ತಯಾರಿ ಸುಲಭ. ಬಲಿತ ಬಾಳೆಕಾಯಿಯನ್ನು ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿ ಬಿಸಿಲಲ್ಲಿ ಅಥವಾ ಡ್ರೈಯರ್‌ನಲ್ಲಿ ಒಣಗಿಸಬೇಕು. ಸಿಪ್ಪೆ ತೆಗೆದ ಕೂಡಲೇ ಆಕ್ಸಿಡೈಸ್ ಆಗಿ ಕಪ್ಪಾಗುವುದನ್ನು ತಡೆಯಲು ಒಂದು ಲೀಟರ್ ನೀರಿಗೆ ಗಂಜಿ ತೆಳಿ ಮತ್ತು ಉಪ್ಪು ಮಿಶ್ರ ಮಾಡಿ ಅದಕ್ಕೆ ಸುಲಿದ ಬಾಳೆಕಾಯಿ ಹಾಕಬೇಕು. ಒಣಗಿದ ಬಳಿಕ ಪುಡಿ ಮಾಡಿ ಖಾದ್ಯಗಳ ತಯಾರಿಗೆ ಬಳಸಬಹುದು