ಅಯೋಧ್ಯೆ: ನ.3ರಿಂದ ಅಯೋಧ್ಯೆಯಲ್ಲಿ ಆರಂಭವಾಗಲಿರುವ 10 ದಿನಗಳ ದೀಪಾವಳಿ ಉತ್ಸವವನ್ನು ಪ್ರಧಾನಿ ನರೇಂದ್ರ ಮೋದಿಯೇ ಉದ್ಘಾಟಿಸಲಿದ್ದಾರಾ? ಹೌದು ಎನ್ನುತ್ತಿವೆ ಮೂಲಗಳು.
ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ಮಹತ್ವದ ವಿಧಾನಸಭೆ ಚುನಾವಣೆಯಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯೇ ಉದ್ಘಾಟನೆಗೆ ಆಗಮಿಸುವ ನಿರೀಕ್ಷೆಯಿದೆ.
ಸಾಮಾನ್ಯವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೀಪೋತ್ಸವ ಉದ್ಘಾಟಿಸುತ್ತಿದ್ದರು. ಈ ಬಗ್ಗೆ ಮಾಹಿತಿ ನೀಡಿರುವ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ, ಪ್ರಧಾನಿ ಮೋದಿಯನ್ನು ಅಯೋಧ್ಯೆಯಲ್ಲಿ ಮತ್ತೊಮ್ಮೆ ನೋಡುವ ಅದೃಷ್ಟವೊಂದು ನಮ್ಮೆದುರಿಗಿದೆ ಎಂದಿದ್ದಾರೆ.
ಇದನ್ನೂ ಓದಿ:‘ಮೌಲ್ವಿಗಳು ನಮಗಿಂತ ಶ್ರೇಷ್ಠರು| PhD,MA ಗಳಿಗೆ ಬೆಲೆ ಇಲ್ಲ’ಎಂದ ತಾಲಿಬಾನ್ ಶಿಕ್ಷಣ ಸಚಿವ
ಆದರೆ ಪ್ರಧಾನಿ ಬಂದೇ ಬರುತ್ತಾರಾ ಎನ್ನುವುದನ್ನು ಅದು ಖಚಿತಪಡಿಸಿಲ್ಲ. ಈ ಮಧ್ಯೆ 6.5 ಲಕ್ಷ ದೀಪಗಳನ್ನು ಉರಿಸಿ ದಾಖಲೆ ನಿರ್ಮಿಸುವ ಗುರಿಯನ್ನೂ ಪ್ರಾಧಿಕಾರ ಹೊಂದಿದೆ.