Advertisement

ಸೆ. 25ರಿಂದ ಆಯುಷ್ಮಾನ್‌ ಜಾರಿ

06:00 AM Aug 16, 2018 | Team Udayavani |

ಹೊಸದಿಲ್ಲಿ: ಬಹುನಿರೀಕ್ಷಿತ ಆರೋಗ್ಯ ವಿಮಾ ಯೋಜನೆ  “ಆಯುಷ್ಮಾನ್‌ ಭಾರತ’ ಸೆ. 25ರಿಂದ ದೇಶಾದ್ಯಂತ ಜಾರಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಬುಧವಾರ ಕೆಂಪುಕೋಟೆ ಆವರಣ ದಿಂದ 72ನೇ ಸ್ವಾತಂತ್ರ್ಯ ದಿನ ನಿಮಿತ್ತ ರಾಷ್ಟ್ರಧ್ವಜಾರೋಹಣ ಬಳಿಕ ಘೋಷಣೆ ಮಾಡಿದ್ದಾರೆ.
ಬಜೆಟ್‌ನಲ್ಲಿ ಘೋಷಿಸಿದ್ದ “ಆಯುಷ್ಮಾನ್‌ ಭಾರತ’ ಆರೋಗ್ಯ ಯೋಜನೆ ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯರ ಜನ್ಮದಿನದಂದೇ ಆರಂಭವಾಗಲಿದೆ. ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ ಎನ್ನುವ ಹೆಸರಿನಲ್ಲಿ ಈ ಯೋಜನೆ ಜಾರಿಯಾಗಲಿದ್ದು, 50 ಕೋಟಿ ದೇಶ ವಾಸಿಗಳಿಗೆ ಅನುಕೂಲವಾಗಲಿದೆ. “ಬುಧವಾರದಿಂದ ಮುಂದಿನ 3-5 ವಾರ ಗಳಲ್ಲಿ ಯೋಜನೆಯ ತಾಂತ್ರಿಕ ಅಂಶಗಳ ಪ್ರಾಯೋಗಿಕ ಪರಿಶೀಲನೆ ಪೂರ್ತಿ ಯಾಗಲಿದೆ ಎಂದು ಮೋದಿ ಹೇಳಿದರು.

Advertisement

ಮಹಿಳಾ ಯೋಧರಿಗೆ ಆಯೋಗ
ಶಾರ್ಟ್‌ ಸರ್ವಿಸ್‌ ಕಮಿಷನ್‌ (ಎಸ್‌ಎಸ್‌ಸಿ) ವ್ಯಾಪ್ತಿಯಲ್ಲಿ ನೇಮಕಗೊಂಡ ಮಹಿಳಾ ಸೇನಾಧಿಕಾರಿಗಳಿಗೆ ಶಾಶ್ವತ ಆಯೋಗ ರಚನೆ ಮಾಡಲಾಗುತ್ತದೆ. ಸೇನಾ ಪಡೆಯಲ್ಲಿ ಲಿಂಗ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಇಂಥ ಕ್ರಮ ಕೈಗೊಳ್ಳಲಾಗಿದೆ ಎಂದರು ಪ್ರಧಾನಿ ಮೋದಿ. 

ತ್ರಿವಳಿ ತಲಾಖ್‌ ಜಾರಿಗೆ ಬದ್ಧ
ಮುಸ್ಲಿಂ ಸಮುದಾಯದ ಮಹಿಳೆಯರ ಅನುಕೂಲಕ್ಕಾಗಿ ತ್ರಿವಳಿ ತಲಾಖ್‌ ನಿಷೇಧ ಕಾಯ್ದೆ ಜಾರಿಗೆ ತರಲು ಕೇಂದ್ರ ಬದ್ಧ. ಅದನ್ನು ಜಾರಿ ಮಾಡಿಯೇ ಮಾಡುತ್ತೇವೆ ಎಂದು ಮೋದಿ ಆಶ್ವಾಸನೆ ನೀಡಿದರು.

4 ವರ್ಷಗಳಲ್ಲಿ ಭಾರತೀಯರ ಯಾನ
4 ವರ್ಷಗಳಲ್ಲಿ ದೇಶ ಸ್ವಾತಂತ್ರ್ಯ ಪಡೆದು 75 ವರ್ಷ ಆಗಲಿದೆ. ಆ ಪ್ರಯುಕ್ತ ಮೊದಲ ಬಾರಿಗೆ ಪುರುಷ ಅಥವಾ ಮಹಿಳೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಅದಕ್ಕೆ “ಗಗನಯಾತ್ರೆ’ ಎಂದು ಹೆಸರು ಇರಿಸಲಾಗುತ್ತದೆ. ರಾಷ್ಟ್ರಧ್ವಜ ಸಹಿತ ಅವರು ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಪ್ರಧಾನಿ ಘೋಷಣೆ ಮಾಡಿದರು. 

ಸ್ವಚ್ಛ ಭಾರತ
ಸ್ವಚ್ಛ ಭಾರತ ಆಂದೋಲನ ಘೋಷಣೆ ಮಾಡಿದಾಗ ಎಲ್ಲರೂ ನಗಾಡಿದ್ದರು. ವಿಶ್ವಸಂಸ್ಥೆಯ ವರದಿ ಪ್ರಕಾರ ದೇಶದಲ್ಲಿನ ಅಭಿಯಾನ ದಿಂದಾಗಿ 3 ಲಕ್ಷ ಮಕ್ಕಳು ಅನಾರೋಗ್ಯದಿಂದ ಅಸು ನೀಗುವುದು ತಪ್ಪಿದೆ ಎಂದು ಮುಕ್ತವಾಗಿ ಶ್ಲಾಘಿಸಿದೆ.

Advertisement

ತೆರಿಗೆದಾರರಿಗೆ ಪುಣ್ಯ
ಯಾವುದೇ ಒಬ್ಬ ತೆರಿಗೆದಾರ ನೀಡುವ ತೆರಿಗೆ ಮೂರು ಬಡ ಕುಟುಂಬಗಳಿಗೆ ಅನ್ನ ಹಾಕುತ್ತದೆ. ಬಡವರಿಗೆ ಅನ್ನ ನೀಡಿದ ಪುಣ್ಯ ಇಂಥ ಪ್ರಾಮಾಣಿಕ ತೆರಿಗೆದಾರರಿಗೆ ಸಲ್ಲುತ್ತದೆ. ಹಾಗಾಗಿ ಪ್ರತಿಯೊಬ್ಬ ತೆರಿಗೆದಾರ ತಾನು ಊಟಕ್ಕೆ ಕುಳಿತಾಗ ಈ ಬಗ್ಗೆ ಸಾರ್ಥಕತೆಯ ಭಾವ ಹೊಂದಲಿ.

ನೀಲಕುರಿಂಜಿ ಪುಷ್ಪದಂತೆ
ನೀಲಗಿರಿಯಲ್ಲಿ 12 ವರ್ಷಗಳಿಗೆ ಒಮ್ಮೆ ನೀಲಕುರಿಂಜಿ ಗಿಡದಲ್ಲಿ ಹೂ ಅರಳುವಂತೆ, ದೇಶಾದ್ಯಂತ ಅಭಿವೃದ್ಧಿಯ ಬಗ್ಗೆ ಬಹಳ ಕಾಲದ ಬಳಿಕ ಧನಾತ್ಮಕ ಚಿಂತನೆ ಆರಂಭವಾಗಿದೆ. ನಮ್ಮ ಸರಕಾರ ಆರಂಭಿಸಿದ ಕಾರ್ಯಕ್ರಮಗಳ ಫ‌ಲಿತಾಂಶ ಬರಲು ಈಗ ಶುರುವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next