ನವದೆಹಲಿ: ಎರಡು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಭೂತಾನ್‌ಗೆ ತೆರಳಿದ್ದಾರೆ. ಅವರು ಶನಿವಾರ ವಾಪಸಾಗಲಿದ್ದಾರೆ.
ಈ ಭೇಟಿಯು ಭಾರತ ಸರ್ಕಾರವು ತನ್ನ ‘ನೆರೆಹೊರೆಯ ಮೊದಲ ನೀತಿ’ಗೆ ಒತ್ತು ನೀಡುವ ಭಾಗವಾಗಿದೆ ಎನ್ನಲಾಗಿದೆ.
ಭೂತಾನ್ ಭೇಟಿ ನೀಡುವ ಕುರಿತು ಪ್ರಧಾನಿ ತಮ್ಮ X ಖಾತೆಯಲ್ಲಿ ‘ಭಾರತ-ಭೂತಾನ್ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳಿಗೆ ಹಾಜರಾಗುವುದಾಗಿ ಹೇಳಿಕೊಂಡಿದ್ದಾರೆ.
ಮಾಹಿತಿಯಂತೆ ಪ್ರಧಾನಿ ಅವರು ಗುರುವಾರ ಭೂತಾನ್ ಗೆ ತೆರಳಬೇಕಿತ್ತು ಆದರೆ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಗುರುವಾರ ತೆರಳಲು ಸಾಧ್ಯವಾಗಲಿಲ್ಲ ಹಾಗಾಗಿ ಶುಕ್ರವಾರ ಬೆಳಿಗ್ಗೆ ದೆಹಲಿಯಿಂದ ತೆರಳಿದ್ದಾರೆ.