Advertisement

ವಾಹನ ಸ್ಕ್ರಾಪೇಜ್ ಪಾಲಿಸಿ : ದೇಶದ ಅಭಿವೃದ್ಧಿಯ ಹಾದಿಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ : ಮೋದಿ

12:25 PM Aug 13, 2021 | Team Udayavani |

ನವ ದೆಹಲಿ : ವಾಹನ ಸ್ಕ್ರಾಪೇಜ್ ಪಾಲಿಸಿಯನ್ನು ಇಂದು(ಶುಕ್ರವಾರ, ಆಗಸ್ಟ್ 13) ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಾರಂಭಿಸಿದರು.

Advertisement

ವಾಹನ ಸ್ಕ್ರಾಪೇಜ್ ಪಾಲಿಸಿಯನ್ನು ಆರಂಭಿಸಿ ಮಾತನಾಡಿದ ಪ್ರಧಾನಿ,  “ಈ ನೀತಿಯು ದೇಶದ ನಗರಗಳಲ್ಲಿ ಮಾಲಿನ್ಯವನ್ನು ತಗ್ಗಿಸಲು, ಪರಿಸರವನ್ನು ರಕ್ಷಿಸಲು ಮತ್ತು ಅಭಿವೃದ್ಧಿಯ ವೇಗವನ್ನು ಹೊಂದಲು ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ”.  ನೀತಿಯು ಭಾರತದ ಅಭಿವೃದ್ಧಿ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಚಮೋಲಿ ಜಿಲ್ಲೆಯ ಮೋಟಾರ್ ವೇ ಬಳಿ ಭಾರಿ ಗುಡ್ಡ ಕುಸಿತ : ಸಂಚಾರ ಅಸ್ತವ್ಯಸ್ಥ

ಈ ಬಗ್ಗೆ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡ ಪ್ರಧಾನಿ ಮೋದಿ, ಯುವಕರು ಮತ್ತು ಸ್ಟಾರ್ಟ್ ಅಪ್‌ ಗಳಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕೋರಿದ್ದಾರೆ.

ಪರಿಸರ ಸ್ನೇಹಿ ಯೋಜನೆಯ ಭಾಗವಾಗಿ  ಈ ಪಾಲಿಸಿಯನ್ನು ಜಾರಿಗೊಳಿಸಲಾಗಿದೆ. ಕಾರ್ಯಸಾಧ್ಯವಾದ ಸರ್ಕ್ಯುಲರ್ ಎಕಾನಮಿಯನ್ನು ರಚಿಸುವುದು ಇದರ ಪ್ರಧಾನ ಉದ್ದೇಶ. ಪರಿಸರದ ಬಗ್ಗೆ ಎಲ್ಲಾ ಸ್ಟೇಕ್ ಹೋಲ್ಡರ್ಸ್  ಜವಾಬ್ದಾರಿಯಿಂದ ಈ ಪಾಲಿಸಿಯೊಂದಿಗೆ ಕೈ ಜೋಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

ವಾಹನ ವಾಹನ ಸ್ಕ್ರಾಪೇಜ್ ಪಾಲಿಸಿ ಪರಿಸರವನ್ನು ಸಂರಕ್ಷಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ. ಸ್ಕ್ರ್ಯಾಪಿಂಗ್ ಮೂಲ ಸೌಕರ್ಯವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಜಾಗತಿಕವಾಗಿಯೂ ಈ ಪಾಲಿಸಿ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ ಎಂದಿದ್ದಾರೆ.

ಇದನ್ನೂ ಓದಿ : ಟ್ವೀಟರ್ ಬ್ಲಾಕ್ ಪ್ರಕರಣ : ಇದು ಪ್ರಜಾಪ್ರಭುತ್ವದ ಮೇಲೆ ವ್ಯವಸ್ಥಿತ ದಾಳಿ: ರಾಹುಲ್ ಸಿಡಿಮಿಡಿ

Advertisement

Udayavani is now on Telegram. Click here to join our channel and stay updated with the latest news.

Next