Advertisement
ನಯಾ ಪೈಸೆ ಬಿಡದೆ ವಸೂಲುಐಪಿಪಿಬಿ ಸೇವೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ, ಯುಪಿಎ ಸರಕಾರದಲ್ಲಿ ಒಂದು ಪ್ರಭಾವಿ ಕುಟುಂಬದ ಆಪ್ತರಿಗಷ್ಟೇ ಕೋಟ್ಯಂತರ ಸಾಲ ನೀಡುವಂಥ ಕೆಟ್ಟ ವ್ಯವಸ್ಥೆ ಇತ್ತು ಎಂದು ಆರೋಪಿಸಿದರು. ಯುಪಿಎ ಅವಧಿಯಲ್ಲಿ “ನಾಮಧಾರಿಗಳ’ ಒಂದೇ ಒಂದು ಫೋನ್ ಕರೆಯ ಮೂಲಕ ಉದ್ಯಮಿಗಳಿಗೆ ಕೋಟ್ಯಂತರ ರೂ. ಸಾಲ ನೀಡಲಾಗಿದೆ. ಅವು ವಸೂಲಾಗದ ಸಾಲಗಳಾಗಿ ಪರಿವರ್ತನೆಗೊಂಡಿವೆ. ಆದರೆ ಇಂಥ ಕೆಟ್ಟ ಸಾಲಗಳನ್ನು ನಯಾ ಪೈಸೆ ಬಿಡದೇ ನಮ್ಮ ಸರಕಾರ ವಸೂಲು ಮಾಡಲಿದೆ ಎಂದು ಗುಡುಗಿದರು.
ಸಾಮಾನ್ಯವಾಗಿ ಬ್ಯಾಂಕ್‌ಗಳು ನೀಡುವ ಬಹುತೇಕ ಸೇವೆಗಳನ್ನೇ ಐಪಿಪಿಬಿ ಕೂಡ ನೀಡಲಿದೆ. ಇದರಲ್ಲಿ ನಾಗರಿಕರು ಉಳಿತಾಯ, ಚಾಲ್ತಿ ಖಾತೆಗಳನ್ನು ತೆರೆಯಬಹುದು. ಉಳಿತಾಯ ಖಾತೆಗೆ ವಾರ್ಷಿಕ ಶೇ. 4ರಷ್ಟು ಬಡ್ಡಿ ನೀಡಲಾಗುತ್ತದೆ. ನಗದು ವರ್ಗಾವಣೆ, ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ ಫರ್ ಸೌಲಭ್ಯ ಪಡೆಯಬಹುದು. ಬಿಲ್ ಪಾವತಿ, ಮರ್ಚೆಂಟ್ ಪೇಮೆಂಟ್, ಎಂಟರ್ ಪ್ರೈಸ್ ಪೇಮೆಂಟ್ ಮಾದರಿಯ ಸೇವೆಗಳು ಲಭ್ಯ. ಐಪಿಪಿಬಿಗೆ ನೇರ ಸಾಲ ಹಾಗೂ ಕ್ರೆಡಿಟ್ ಕಾರ್ಡ್‌ಗಳ ಸೌಲಭ್ಯ ನೀಡುವ ಅಧಿಕಾರವಿರುವುದಿಲ್ಲ. ಆದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ), ಬಜಾಜ್ ಅಲಯನ್ಸ್ ಲೈಫ್ ಇನ್ಶೂರೆನ್ ಜತೆಗೆ ಕೈ ಜೋಡಿಸಿರುವ ಐಬಿಬಿಪಿ, ಥರ್ಡ್ ಪಾರ್ಟಿ ಸಾಲ ಹಾಗೂ ವಿಮೆ ಸೌಲಭ್ಯ ನೀಡಲಿದೆ. ಸೇವೆ ಪಡೆಯುವ ಮಾರ್ಗ
ನಾಗರಿಕರು ಐಪಿಪಿಬಿ ಸೇವೆಗಳನ್ನು ಅಂಚೆ ಕಚೇರಿಯ ಕೌಂಟರ್‌ಗಳಲ್ಲಿ, ಮೈಕ್ರೋ ಎಟಿಎಂಗಳಲ್ಲಿ, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಆ್ಯಪ್, ಎಸ್‌ಎಂಎಸ್ ಅಥವಾ ಐವಿಆರ್ ಸೇವೆಗಳ ಮೂಲಕ ಪಡೆಯಬಹುದಾಗಿದೆ.
Related Articles
ದೇಶದ ಒಟ್ಟು 650 ಅಂಚೆ ಕಚೇರಿಗಳು ಹಾಗೂ 3,250 ಸೇವಾ ಕೇಂದ್ರಗಳಲ್ಲಿ ಐಪಿಪಿಬಿ ಸೇವೆ ಪಡೆಯಬಹುದು. ಡಿಸೆಂಬರ್ ವೇಳೆಗೆ 1.55 ಲಕ್ಷ ಕೇಂದ್ರಗಳಲ್ಲಿ ಇದು ಲಭ್ಯವಾಗಲಿದೆ. ಇವುಗಳಲ್ಲಿ 1.30 ಲಕ್ಷ ಕೇಂದ್ರಗಳು ಗ್ರಾಮೀಣ ಪ್ರದೇಶದಲ್ಲೇ ಸೇವೆ ನೀಡಲಿವೆ.
Advertisement
ಭಾಷಣದ ಮುಖ್ಯಾಂಶಗಳುಏಷ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನ ಗೆದ್ದಿದೆ. ಭಾರತದ ಆರ್ಥಿಕ ಪರಿ ಸ್ಥಿತಿಯೂ ಚಿನ್ನದ ಪದಕ ಗಳಿಸಿದ್ದು, ಈ ವಿತ್ತೀಯ ವರ್ಷದ ಮೊದಲ ತ್ತೈಮಾಸಿಕದಲ್ಲಿ ಶೇ. 8.2ರಷ್ಟು ಜಿಡಿಪಿ ದಾಖಲಿಸಿದೆ. ದೇಶದ ಆರ್ಥಿಕ, ಸಾಮಾಜಿಕ ವ್ಯವಸ್ಥೆಯಲ್ಲಿ ಐಪಿಪಿಬಿ ಭಾರೀ ಬದಲಾವಣೆ ತರಲಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಚ್ಚು ಉಳಿತಾಯ ಮಾಡಲು ಜಾಗೃತಿ ನಡೆಸಲಾಗುವುದು. ರೈತರು, ಗುಡ್ಡಗಾಡು, ಬಹುದೂರ ವಾಸಿಗಳಿಗೆ ಐಪಿಪಿಬಿ ನೆರವಾಗಲಿದೆ. 2014ರಲ್ಲಿ 12 ಅತಿ ದೊಡ್ಡ ಕಪಟ ಕಂಪೆನಿಗಳಿಗೆ 2 ಲಕ್ಷ ಕೋಟಿ ರೂ.ಗಳಷ್ಟು ಸಾಲ ನೀಡಲಾಗಿದೆ. 27 ಅತಿ ದೊಡ್ಡ ಸಾಲಗಾರರಿಗೆ 1 ಲಕ್ಷ ಕೋ. ರೂ. ಸಾಲ ನೀಡಲಾಗಿದೆ. 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕಳ್ಳ ಸಾಲಗಳನ್ನು ಪತ್ತೆ ಹಚ್ಚಿದ್ದೇವೆ.