Advertisement
ರಾಷ್ಟ್ರೀಯ ಕ್ರೀಡಾ ದಿನದಂದೇ ಪ್ರಧಾನಿ ಮೋದಿ ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ ನೀಡಿದ್ದು, ಕ್ರೀಡೆ ಎನ್ನುವುದು ನೇರವಾಗಿ ನಮ್ಮ ದೇಹದ ಫಿಟ್ ನೆಸ್ ಗೆ ಸಂಬಂಧ ಹೊಂದಿದೆ. ಆದರೆ ಇಂದಿನ ಫಿಟ್ ಇಂಡಿಯಾ ಆಂದೋಲನ ಅದಕ್ಕಿಂತ ಸಂಪೂರ್ಣ ಭಿನ್ನವಾದದ್ದು. ಫಿಟ್ನೆಸ್ ಎಂಬುದು ಕೇವಲ ಕ್ರೀಡೆಯಲ್ಲ. ಆದರೆ ಅದು ನಮ್ಮ ಬದುಕಿನ ಒಂದು ಭಾಗ ಎಂದು ಮೋದಿ ಹೇಳಿದರು.
Related Articles
Advertisement
*ಫಿಟ್ನೆಸ್ ನಮ್ಮ ಜೀವನದ ಮಂತ್ರವಾಗಬೇಕು. ಫಿಟ್ನೆಸ್ ಎಂಬುದು ಕೇವಲ ಶಬ್ದವಲ್ಲ, ಇದೊಂದು ಆರೋಗ್ಯಕರ ಮತ್ತು ಸಂತಸದ ಜೀವನದ ಕೀಲಿ ಕೈಯಾಗಿದೆ..
*ಕೆಲವು ದಶಕಗಳ ಹಿಂದೆ ಒಬ್ಬ ಸಾಮಾನ್ಯ ವ್ಯಕ್ತಿ 8ರಿಂದ 10 ಕಿಲೋ ಮೀಟರ್ ನಡೆಯುತ್ತಿದ್ದ. ಬಳಿಕ ತಂತ್ರಜ್ಞಾನ ಬದಲಾಗತೊಡಗಿತು. ಆಧುನಿಕ ವ್ಯವಸ್ಥೆ, ಸಾರಿಗೆ ಬರತೊಡಗಿತು, ಇದರಿಂದ ವ್ಯಕ್ತಿ ನಡೆದಾಡುವುದು ಕಡಿಮೆಯಾಗತೊಡಗಿತು.
ಭಾಷಣದ ಹೈಲೈಟ್ಸ್:
*ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಿನ್ನೆಲೆಯಲ್ಲಿ ಎಲ್ಲರಿಗೂ ನನ್ನ ಶುಭಾಶಯಗಳು
*ಇಂತಹ ವಿಶಿಷ್ಟ ದಿನಾಚರಣೆ ಆಚರಿಸುತ್ತಿರುವ ನಮಗೆ ಹಾಕಿ ದಂತಕಥೆ ಧ್ಯಾನ್ ಚಂದರ್ ರಂತಹ ಕ್ರೀಡಾ ತಾರೆಗಳನ್ನು ಪಡೆದಿದ್ದೇವೆ. ಧ್ಯಾನ್ ಚಂದ್ ಅದ್ಭುತ ಕ್ರೀಡಾಪಟು.