Advertisement

ಸ್ವಾತಂತ್ರ್ಯವೀರರಿಗೆ ಡಿಜಿಟಲ್‌ ನಮನ!- ನಮ್ಮ ಸಂದೇಶದಿಂದ ಬೆಳಗಲಿದೆ “ಡಿಜಿಟಲ್‌ ಜ್ಯೋತಿ’

09:53 AM Jul 24, 2022 | Team Udayavani |

ಹೊಸದಿಲ್ಲಿ: ದೇಶದ ಸ್ವಾತಂತ್ರ್ಯ ವೀರರಿಗೆ ಗೌರವ ಸಲ್ಲಿಸಬೇಕೆಂಬ ಬಯಕೆ ಇದೆಯೇ? ಹಾಗಿದ್ದರೆ ಕುಳಿತಲ್ಲಿಂದಲೇ ಸ್ವಾತಂತ್ರ್ಯ ಹೋರಾಟಗಾರರಿಗೆ “ಡಿಜಿಟಲ್‌ ಗೌರವ’ ಸಮರ್ಪಣೆ ಮಾಡಬಹುದು. ಈ ಅವಕಾಶವನ್ನು ಕೇಂದ್ರ ಸರಕಾರ ನೀಡಿದೆ. ಪ್ರಧಾನಿ ಮೋದಿ ಈ ಕುರಿತು ಶನಿವಾರ ಟ್ವೀಟ್‌ ಮಾಹಿತಿ ನೀಡಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ನಾಗರಿಕರೆಲ್ಲರೂ ಈ ವಿಶಿಷ್ಟ, ವಿನೂತನ ಕಾರ್ಯದಲ್ಲಿ ಭಾಗಿಯಾಗುವಂತೆ ಕರೆ ಮಾಡಿದ್ದಾರೆ.

Advertisement

ಏನಿದು ಡಿಜಿಟಲ್‌ ಗೌರವ?
ಹೊಸದಿಲ್ಲಿಯ ಸೆಂಟ್ರಲ್‌ ಪಾರ್ಕ್‌ನಲ್ಲಿ ಒಂದು ಸ್ಕೈ ಬೀಮ್‌ ಲೈಟ್‌ ಅಳವಡಿಸಲಾಗಿದೆ. ದೇಶದ ನಾಗರಿಕರು ಆನ್‌ಲೈನ್‌ನಲ್ಲಿ ಸ್ವಾತಂತ್ರ್ಯವೀರರಿಗೆ ನಮನ ಸಲ್ಲಿಸುತ್ತಿದ್ದಂತೆ ಈ “ಡಿಜಿಟಲ್‌ ಜ್ಯೋತಿ’ ಮತ್ತಷ್ಟು ಪ್ರಜ್ವಲಿಸಲಾರಂಭಿಸುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ವೀರರಿಗೆ ನಾವು ನೀಡುವ ವಿಶೇಷ ಶ್ರದ್ಧಾಂಜಲಿ ಈ ಡಿಜಿಟಲ್‌ ಜ್ಯೋತಿ ಎಂದು ಪ್ರಧಾನಿ ಹೇಳಿದ್ದಾರೆ.

ನಾವೇನು ಮಾಡಬೇಕು?
– ಮೊದಲು https://digitaltribute.in ಗೆ ಲಾಗಿನ್‌ ಆಗಿ
– ಅಲ್ಲಿ Pay Tribute(ಶ್ರದ್ಧಾಂಜಲಿ ಸಲ್ಲಿಸಿ) ಎಂಬ ಬಟನ್‌ ಕ್ಲಿಕ್‌ ಮಾಡಿ
– ಅನಂತರ ಹೆಸರು, ಇಮೇಲ್‌ ಐಡಿ, ದೂರವಾಣಿ ಸಂಖ್ಯೆ ನಮೂದಿಸಬೇಕು.
– ಬಳಿಕ ಅಲ್ಲಿರುವ ಸಂದೇಶಗಳ ಪೈಕಿ ಒಂದನ್ನು ಆಯ್ಕೆ ಮಾಡಿ, “submit’ ‘ ಬಟನ್‌ ಒತ್ತಬೇಕು.
– “ನಿಮ್ಮ ಸಂದೇಶ ಸಂಖ್ಯೆಯೊಂದಿಗೆ ನಿಮ್ಮ ಗೌರವಾರ್ಪಣೆಯ ವೀಡಿಯೋ ರೆಕಾರ್ಡಿಂಗ್‌ ನಿಮ್ಮ ಇಮೇಲ್‌ ವಿಳಾಸಕ್ಕೆ ರವಾನಿಸಲಾಗುವುದು’ ಎಂಬ ಸಂದೇಶ ಬರುತ್ತದೆ.
– ಅದೇ ರೀತಿ ನಾವು ರವಾನಿಸಿದ ಸಂದೇಶವು ಸೆಂಟ್ರಲ್‌ ಪಾರ್ಕ್‌ನ ಎಲ್‌ಇಡಿ ಪರದೆಯಲ್ಲಿ ಕಾಣಿಸುತ್ತದೆ ಮತ್ತು ಡಿಜಿಟಲ್‌ ಜ್ವಾಲೆ ಮತ್ತಷ್ಟು ಪ್ರಜ್ವಲಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next