Advertisement
ಶ್ರೀನಗರದಲ್ಲಿ ಚುನಾವಣೆ ರ್‍ಯಾಲಿಯಲ್ಲಿ ಮಾತನಾ ಡಿದ ಅವರು, ಇದು ಕಾಂಗ್ರೆಸ್‌ನ ಮನಃಸ್ಥಿತಿಯನ್ನು ತೋರಿಸುತ್ತದೆ. ಆಪಕ್ಷದ ವಾರಸುದಾರ ವಿದೇಶದಲ್ಲಿನಮ್ಮ ದೇವ-ದೇವತೆಯರು ದೇವ ರಲ್ಲ ಎಂದಿದ್ದಾರೆ.
Related Articles
ನಮ್ಮ ಸರಕಾರದ ಅವಧಿಯಲ್ಲಿ ಜಮ್ಮು- ಕಾಶ್ಮೀರದ ಯುವಕರಿಗೆ ಮತ್ತೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮತಗಳು ಬದಲಾವಣೆ ತರಲು ಸಾಧ್ಯವಿದೆ ಎಂಬ ಭರವಸೆ ಅವರಿಗೆ ಬಂದಿದೆ. ಇದೇ ಅವರ ಸಶಕ್ತೀಕರಣದಲ್ಲಿ ಮೊದಲ ಹೆಜ್ಜೆ. ಜಮು- ಕಾಶ್ಮೀರದ ಯುವಕರು ಇನ್ನೆಂದೂ ಅಸಹಾಯಕರಲ್ಲ. ಯುವಕರಿಗೆ ಉದ್ಯೋಗ ನೀಡಲು ಬಿಜೆಪಿ ದೊಡ್ಡ ಘೋಷಣೆ ಮಾಡಿದೆ. ಜತೆಗೆ ಕೇಂದ್ರಾಡಳಿತ ಪ್ರದೇಶವಾಗಿರುವ ಇಲ್ಲಿಗೆ ಮತ್ತೆ ರಾಜ್ಯದ ಸ್ಥಾನಮಾನ ನೀಡಲಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
Advertisement
ಕಾಂಗ್ರೆಸ್, ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿ ಪಕ್ಷಗಳ ವಿರುದ್ಧ ಹರಿಹಾಯ್ದ ಅವರು, ಈ ಮೂರು ಪಕ್ಷಗಳು ಮತ್ತವರ ಕುಟುಂಬಗಳು ಪ್ರಜಾಪ್ರಭುತ್ವ ಮತ್ತು ಕಾಶ್ಮೀರಿತನದ ಕತ್ತುಹಿಸುಕಿವೆ. ಅವುಗಳ ಅವಧಿಯಲ್ಲಿ ಕಾಶ್ಮೀರದ ನೀರು ಪಾಕ್‌ಗೆ ಹೋಗುತ್ತಿತ್ತು. ನಮ್ಮ ಅವಧಿಯಲ್ಲಿ ಅದನ್ನು ನಿಲ್ಲಿಸಲಾಗಿದೆ. ಜಗತ್ತಿನ ಯಾವ ಶಕ್ತಿಗೂ ಜಮ್ಮುಕಾಶ್ಮೀರದಲ್ಲಿ ಮತ್ತೆ 370ನೇ ವಿಧಿಯನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಹೇಳಿದ್ದೇನು?ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದ ರಾಹುಲ್ ಗಾಂಧಿ, ದೇವತೆ ಅಂದರೆ ಒಬ್ಬನ ಅಂತರಂಗ, ಬಹಿರಂಗದ ಅಭಿವ್ಯಕ್ತಿಗಳು ಒಂದೇ ರೀತಿಯಿರುವುದು. ಅದರರ್ಥ ಆತ ಸಂಪೂರ್ಣ ಪಾರದರ್ಶಕ ಎಂದು. ಅದು ದೇವರು ಎಂಬರ್ಥವಲ್ಲ. ಒಬ್ಬ ವ್ಯಕ್ತಿ ತಾನು ನಂಬುವ, ಯೋಚಿಸುವ ಎಲ್ಲವನ್ನೂ ಹೇಳುತ್ತಾನೆಂದರೆ ಮತ್ತು ಅದನ್ನು ಬಹಿರಂಗವಾಗಿ ಅಭಿವ್ಯಕ್ತಿಸುತ್ತಾನೆಂದರೆ ಅದೇ ದೇವತೆ ಎಂದು ಹೇಳಿದ್ದರು. ಪಾಕ್‌ಗೆ ಸಿಂಧು ನೀರು
ಕಾಂಗ್ರೆಸ್ ಕಾರಣ: ಮೋದಿ
ಸಿಂಧೂ ನದಿಯ ನೀರು ಪಾಕಿಸ್ಥಾನಕ್ಕೆ ಹರಿದು ಹೋಗಲು ಕಾಂಗ್ರೆಸ್ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಪಕ್ಷಗಳು ಕಾರಣ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ. ಕಟ್ರಾದಲ್ಲಿ ಮಾತನಾಡಿದ ಅವರು, 7 ದಶಕಗಳಿಂದ ನೀರು ಪಾಕಿಸ್ಥಾನಕ್ಕೆ ಹರಿದು ಹೋಗುತ್ತಿದೆ. ನದಿಗೆ ಅಣೆಕಟ್ಟು ಕಟ್ಟಿ ನೀರನ್ನು ಕಾಶ್ಮೀರದ ಜನರಿಗೆ ಸದುಪಯೋಗ ಮಾಡುವ ಧೈರ್ಯವನ್ನು ಎರಡೂ ಪಕ್ಷಗಳು ಮಾಡಲಿಲ್ಲ ಎಂದು ದೂರಿದರು. ಮೋದಿ ಹೇಳಿದ್ದೇನು?
-ಜಮ್ಮು-ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ಕೊಡುವೆವು
-ಕಾಂಗ್ರೆಸ್ ನಮ್ಮ ಸಂಸ್ಕೃತಿಯನ್ನು ಅವಮಾನಿಸುತ್ತದೆ
-ಅದರ ಮೂಲಕ ಕೆಲವೇ ಮತಗಳಿ ಗಾಗಿ ಓಲೈಕೆ ಮಾಡುತ್ತಿದೆ
-ಕಾಶ್ಮೀರದ ಡೋಗ್ರಾ ಸಂಸ್ಕೃತಿಗೂ ಕಾಂಗ್ರೆಸ್ ಅವಮಾನ
-ನಮ್ಮ ಸರಕಾರದ ಅವಧಿಯಲ್ಲಿ ಕಾಶ್ಮೀರಿ ಯುವಕರಿಗೆ ಹೆಚ್ಚಿನ ಬಲ