Advertisement

“ಮೋದಿ ರಾಜ್ಯ ಭೇಟಿಯ ಪ್ರತಿ ನಿಮಿಷದ ಖರ್ಚು 8 ಲಕ್ಷ ರೂ.’

03:30 PM Apr 12, 2023 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದರೆ ಅವರ ಭೇಟಿಯ ಪ್ರತಿ ನಿಮಿಷಕ್ಕೆ 8.63 ಲಕ್ಷ ರೂ ರಾಜ್ಯದ ಬೊಕ್ಕಸದಿಂದ ಖರ್ಚಾಗುತ್ತದೆ ಎಂದು ಎಐಸಿಸಿ ವಕ್ತಾರ ಗೌರಬ್‌ ವಲ್ಲಭ್‌ ಟೀಕಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಧಾನಿ ಪ್ರತಿ ಬಾರಿ ರಾಜ್ಯಕ್ಕೆ ಬಂದಾಗಲೂ ಕೋಟ್ಯಂತರ ರೂ. ಖರ್ಚಿನ ಭಾರವನ್ನು ರಾಜ್ಯ ಸರ್ಕಾರ ಹೊರಬೇಕಾಗುತ್ತದೆ. ಕೇಂದ್ರ ಸರ್ಕಾರವೇಪ್ರಧಾನಿ ಭೇಟಿಯ ಖರ್ಚು ಭರಿಸಲಿ ಎಂದು ಹೇಳಿದರು.

ಅಮೂಲ್‌ ಮೂಲಕ ನಂದಿನಿ ಸಂಸ್ಥೆಯನ್ನು ನಾಶ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇನ್ನು ಸಿಆರ್‌ಪಿಎಫ್ ಕಾನ್‌ಸ್ಟೆàಬಲ್‌ ನೇಮಕಾತಿಯಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿರುವವರೆಗೆ ಪ್ರತಿ ಹಂತದಲ್ಲಿ ಕನ್ನಡಿಗರ ಮೇಲೆ ಅನ್ಯಾಯವಾಗುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಬೊಮ್ಮಾಯಿ ಸರ್ಕಾರ ಹಾಗೂ ಬಿಜೆಪಿ ಸಂಸದರು ಮೌನಕ್ಕೆ ಶರಣಾಗಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next