ವ್ಲಾಡಿವೋಸ್ಟಾಕ್(ರಷ್ಯಾ): ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ “ಮೇಕ್ ಇನ್ ಇಂಡಿಯಾ” ಯೋಜನೆಯ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶ್ಲಾಘಿಸಿದ್ದು, ರಷ್ಯಾದ ಅಧಿಕಾರಿಗಳು ಕೂಡಾ ಭಾರತದಂತೆ ರಷ್ಯಾದ ಕಾರುಗಳನ್ನೇ ಬಳಸಬೇಕೆಂದು ಕರೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Kerala Nipah Case: ಕೇರಳ 7 ಗ್ರಾಮಗಳು ಕಂಟೈನ್‌ಮೆಂಟ್ ವಲಯಕ್ಕೆ, ಶಾಲೆಗಳಿಗೆ ರಜೆ
ಪುಟಿನ್ ಅವರು ಮಂಗಳವಾರ (ಸೆ.12) ವ್ಲಾಡಿವೋಸ್ಟಾಕ್ ನಲ್ಲಿ ನಡೆದ 8ನೇ ಈಸ್ಟರ್ನ್ ಎಕನಾಮಿಕ್ ಫೋರಂನ ಪೂರ್ಣಾಧಿವೇಶನದಲ್ಲಿ ಮಾತನಾಡುತ್ತಾ ಈ ಸಲಹೆ ನೀಡಿರುವುದಾಗಿ ವರದಿ ವಿವರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆ ಸಮರ್ಪಕವಾದ ಆಲೋಚನೆಯದ್ದಾಗಿದೆ. ಈ ನಿಟ್ಟಿನಲ್ಲಿ ರಷ್ಯಾದ ಅಧಿಕಾರಿಗಳು ಕೂಡಾ ವಿದೇಶಿ ಬ್ರ್ಯಾಂಡ್ ವಾಹನಗಳ ವ್ಯಾಮೋಹ ಬಿಟ್ಟು ದೇಶೀಯ ರಷ್ಯಾದ ಕಾರುಗಳನ್ನೇ ಬಳಕೆ ಮಾಡಬೇಕು ಎಂದು ಹೇಳಿದರು.
“ನಿಮಗೆ ಗೊತ್ತಾ…ನಮ್ಮಲ್ಲಿ ಆಗ ದೇಶೀ ನಿರ್ಮಿತ ಕಾರುಗಳು ಇರಲಿಲ್ಲ. ಆದರೆ ನಾವು ಈಗ ಕಾರನ್ನು ತಯಾರಿಸುತ್ತಿದ್ದೇವೆ. 1990ರ ದಶಕದಲ್ಲಿ ನಾವು ದೊಡ್ಡ ಪ್ರಮಾಣದಲ್ಲಿ ಖರೀದಿಸಿದ ಮರ್ಸಿಡಿಸ್ ಅಥವಾ Audi ಕಾರುಗಳಿಗಿಂತ ಆಧುನಿಕವಾಗಿ ಕಾಣುತ್ತಿಲ್ಲ ಎಂಬುದು ನಿಜ. ಆದರೆ ಇದೊಂದು ಸಮಸ್ಯೆಯಲ್ಲ. ಯಾಕೆಂದರೆ ನಮ್ಮ ಅನೇಕ ಪಾಲುದಾರ ದೇಶಗಳಂತೆ ಭಾರತದ ಉದಾಹರಣೆಯನ್ನು ಅನುಸರಿಸಬೇಕಾಗಿದೆ” ಎಂದು ಪುಟಿನ್ ಈ ಸಂದರ್ಭದಲ್ಲಿ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.