Advertisement
ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಗುರುವಾರ ನಡೆದ ಕಾಂಗ್ರೆಸ್ಸಿನ ಬಹಿರಂಗ ಸಭೆಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಅವರ ವಿಚಾರಧಾರೆಗಳು ಬಹಳ ಕೆಟ್ಟದಾಗಿರುವುದರಿಂದ ಇಡೀ ದೇಶ ಹಾಳಾಗುತ್ತಿದೆ. ಒಂದು ಲೀಟರ್ ಹಾಲಲ್ಲಿ ಗೊಬ್ಬರ ಹಾಕಿದರೆ ಸಾಕು ಅದು ಕೆಟ್ಟು ಹೋಗುತ್ತದೆ. ಅದಕ್ಕೆ ದೊಡ್ಡ ಪದಾರ್ಥ ಬೇಕಿಲ್ಲ. ಹಾಗೇಯೆ ನಿನೋಬ್ಬನೇ ಸಾಕು ದೇಶ ಹಾಳು ಮಾಡೋಕೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯ ನಂತರ ರೋಣ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹೇಳಿಕೆಯನ್ನೇ ಉಲ್ಟಾ ಹೊಡೆದರು. ಮೋದಿ ವಿಷದ ಹಾವು ಇದ್ದಂತೆ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಹಾಗೆ ಹೇಳಿಲ್ಲ, ಬಿಜೆಪಿ ಒಂದು ಹಾವು ಇದ್ದಂಗೆ, ಸ್ವಲ್ಪ ನೆಕ್ಕಿ ನೋಡ್ತೀವಿ ಅಂದ್ರೆ ಅಲ್ಟಿಮೇಟ್ಲಿ ಡೆತ್ ಅಂತ ಹೇಳಿದ್ದೆನೆ. ಮೋದಿ ಅವರಿಗೆ ಹೇಳಿಲ್ಲ. ವೈಯಕ್ತಿಕವಾಗಿ ನಾನು ಯಾರಿಗೂ ಹೇಳುವುದಿಲ್ಲ. ಯಾರ ಬಗ್ಗೆಯೂ ಬಗ್ಗೆಯೂ ನನಗೆ ಅಸೂಯೆ ಇಲ್ಲ. ಬಿಜೆಪಿ ಐಡಿಯಾಲಾಜಿ ಒಂದು ವಿಷದಂತಿದೆ. ಆ ಐಡಿಯಾಲಾಜಿ ನೀವು ಸಪೋರ್ಟ್ ಮಾಡಿದ್ರೆ, ನೀವು ನೆಕ್ಕಿ ನೋಡ್ತೀವಿ ಅಂದ್ರೆ ಸಾವು ಖಚಿತ ಎಂಬ ಅರ್ಥದಲ್ಲಿ ಹೇಳಿದ್ದೇನೆ ಎಂದು ಸಭೆಯಲ್ಲಿ ಮಾತನಾಡಿದ ಮಾತುಗಳನ್ನು ಬದಲಿಸಿದರು.
Related Articles
Advertisement
”ಪ್ರಧಾನಿ ಮೋದಿ ಅವರೊಂದಿಗಿನ ನಮ್ಮ ಹೋರಾಟ ವೈಯಕ್ತಿಕ ಹೋರಾಟವಲ್ಲ. ಅದೊಂದು ಸೈದ್ಧಾಂತಿಕ ಹೋರಾಟ. ನನ್ನ ಉದ್ದೇಶ ಯಾರ ಮನಸ್ಸಿಗೂ ನೋವಾಗಿರಲಿಲ್ಲ ಮತ್ತು ತಿಳಿದೋ ತಿಳಿಯದೆಯೋ ಯಾರದೋ ಭಾವನೆಗೆ ಧಕ್ಕೆಯಾದರೆ ಅದು ನನ್ನ ಉದ್ದೇಶವಾಗಿರಲಿಲ್ಲ.” ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.