Advertisement

PM Modiಗೆ ನಾಜಿ ಪ್ರಚಾರಕ ಗೋಬೆಲ್ಸ್‌ನೇ ಸ್ಫೂರ್ತಿ: ಕಾಂಗ್ರೆಸ್‌

02:08 AM Apr 30, 2024 | Team Udayavani |

ಹೊಸದಿಲ್ಲಿ: “ಕಾಂಗ್ರೆಸ್‌ನ ನ್ಯಾಯಪತ್ರಗಳ ಬಗ್ಗೆ ಮಾತನಾಡುವಾಗ ಪ್ರಧಾನಿ ಮೋದಿ ನಾಜಿ ಪ್ರಪಗಂಡ ಸಚಿವ ಜೋಸೆಫ್ ಗೋಬೆಲ್ಸ್‌ (ಸುಳ್ಳು ಸುದ್ದಿಗಳ ಪ್ರಚಾರಕ) ಅವರಿಂದಲೇ ಸ್ಫೂರ್ತಿ ಪಡೆದು ಮಾತನಾಡುತ್ತಿರುವಂತೆ ಕಾಣುತ್ತಾರೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ವ್ಯಂಗ್ಯವಾಡಿದ್ದಾರೆ.

Advertisement

ಕಾಂಗ್ರೆಸ್‌ ತನ್ನ ನ್ಯಾಯಪತ್ರಗಳಲ್ಲಿ ಬಡವರು ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿಗೆ ದೂರವಾದ ಘೋಷಣೆಗಳನ್ನು ಮಾಡಿದೆ ಎಂದು ಪಧಾನಿ ಆಕ್ಷೇಪಿಸಿದ ಬೆನ್ನಲ್ಲೇ, ಜೈರಾಮ್‌ ರಮೇಶ್‌ ಈ ರೀತಿ ಟೀಕೆ ಮಾಡಿದ್ದಾರೆ.”ಎಂಎ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮೋದಿ, ಆ ವೇಳೆಯಲ್ಲೇ ಗೋಬೆಲ್ಸ್‌ನ ತತ್ತÌ ಸಿದ್ಧಾಂತಗಳನ್ನು ಓದಿರ‌ಬೇಕು. ಹಾಗಾಗಿಯೇ “ಸುಳ್ಳು ಹೇಳುವುದಾದರೆ, ದೊಡ್ಡ ಸುಳ್ಳನ್ನೇ ಹೇಳಬೇಕು, ಅದೇ ಸತ್ಯವೆಂದು ಪಟ್ಟು ಹಿಡಿಯಬೇಕು ಎಂಬ ಗೋಬೆಲ್ಸ್‌ ಸಿದ್ಧಾಂತವನ್ನು ಪಾಲಿಸುತ್ತಿದ್ದಾರೆ ಎಂದಿದ್ದಾರೆ. ಜತೆಗೆ ಕಾಂಗ್ರೆಸ್‌ ಕುರಿತಂತೆ ಮೋದಿ ನೀಡುತ್ತಿರುವ ಅಸಭ್ಯ ಹೇಳಿಕೆಗಳೆಲ್ಲ ಆತಂಕ ಸೃಷ್ಟಿಸುವಂತದ್ದಾಗಿದ್ದು. ಮೋದಿ ಅವರ ಧ್ಯೇಯವೇ “ಅಸತ್ಯ ಮೇವ ಜಯತೇ ‘ ಎಂಬುದಕ್ಕೆ ಇದೇ ನೈಜ ಉದಾಹರಣೆ ಎಂದಿದ್ದಾರೆ.

ಧರ್ಮದ ಆಧಾರದಲ್ಲಿ ಪ್ರಚಾರ: ಬಿಜೆಪಿ ವಿರುದ್ಧ ಆಯೋಗಕ್ಕೆ “ಕೈ’ ದೂರು
ಹೊಸದಿಲ್ಲಿ: ಚುನಾವಣೆ ಪ್ರಚಾರದ ವೇಳೆ ಬಿಜೆಪಿ ನಾಯಕರು ಧರ್ಮದ ಆಧಾರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದು ಕಾಂಗ್ರೆಸ್‌ ಚುನಾವಣ ಆಯೋಗಕ್ಕೆ ಸೋಮವಾರ ದೂರು ನೀಡಿದೆ. ರಾಜೀವ್‌ ಶುಕ್ಲಾ, ಸುಪ್ರಿಯಾ ಶಿರ್ನಾತೆ ಮತ್ತು ಇತರ ನಾಯಕರು ಆಯೋಗಕ್ಕೆ ತೆರಳಿ, ಒಟ್ಟು 20 ದೂರು ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಇತರರು ಕಾಂಗ್ರೆಸ್‌ ಪ್ರಣಾಳಿಕೆ ನ್ಯಾಯಪತ್ರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ದೂರಿನಲ್ಲಿ ಉಲ್ಲೇಖೀಸಲಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಜೀವ್‌ ಶುಕ್ಲಾ ಹೇಳಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next