ದುಬೈ: ವಿಶ್ವ ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ತಡರಾತ್ರಿ ದುಬೈಗೆ ಆಗಮಿಸಿದ್ದಾರೆ. ಇಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.
ಈ ವೇಳೆ ಅಲ್ಲಿನ ಅನಿವಾಸಿ ಭಾರತೀಯರು ‘ಮೋದಿ-ಮೋದಿ’, ‘ಅಬ್ಕಿ ಬಾರ್ ಮೋದಿ ಸರ್ಕಾರ್’, ‘ವಂದೇ ಮಾತರಂ’ ಮುಂತಾದ ಘೋಷಣೆಗಳೊಂದಿಗೆ ಪ್ರಧಾನಿ ನರೇಂದ್ರ ಅವರನ್ನು ಸ್ವಾಗತಿಸುವ ಮೂಲಕ ಮುಂದಿನ ಬಾರಿ 400 ಕ್ಕೂ ಅಧಿಕ ಸೀಟುಗಳಿಂದ ಗೆಲ್ಲುವಂತೆ ಶುಭ ಹಾರೈಸಿದರು.
ದುಬೈ ತೆರಳಿದ ಅಲ್ಲಿನ ಅನಿವಾಸಿಗಳನ್ನು ಭೇಟಿಯಾಗಿರುವ ಫೋಟೋಗಳನ್ನು ಪ್ರಧಾನಿ ತಮ್ಮ ಟ್ವಿಟರ್ ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ “ದುಬೈನಲ್ಲಿರುವ ಭಾರತೀಯ ಸಮುದಾಯದ ಆತ್ಮೀಯ ಸ್ವಾಗತದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. “ಅವರ ಬೆಂಬಲ ಮತ್ತು ಉತ್ಸಾಹವು ನಮ್ಮ ಸಂಸ್ಕೃತಿ ಮತ್ತು ಬಲವಾದ ಸಂಬಂಧಗಳಿಗೆ ಸಾಕ್ಷಿಯಾಗಿದೆ.” ಎಂದು ಹೇಳಿಕೊಂಡಿದ್ದಾರೆ.
ಶೃಂಗಸಭೆಯಲ್ಲಿ COP28 ನಲ್ಲಿ, ಜಾಗತಿಕ ನಾಯಕರು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ತಂತ್ರಗಳನ್ನು ಚರ್ಚಿಸಲಿದ್ದಾರೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಲ್ಲದೆ, ಪ್ರಧಾನಿ ಮೋದಿ ದುಬೈನಲ್ಲಿ ಇತರ ಮೂರು ಉನ್ನತ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಸಾಧಿಸಿದ ಪ್ರಗತಿಯನ್ನು ನಿರ್ಣಯಿಸಲು ಮತ್ತು ಭವಿಷ್ಯದ ನೀತಿಗಳನ್ನು ನಿರ್ಧರಿಸಲು COP28 ಒಂದು ವೇದಿಕೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: Cyclone: ಚೆನ್ನೈನಲ್ಲಿ ಮುಂದುವರೆದ ಮಳೆ: ತಮಿಳುನಾಡು – ಆಂಧ್ರ ಕರಾವಳಿಯಲ್ಲಿ ಚಂಡಮಾರುತ ಭೀತಿ