Advertisement
ಚಾಮರಾಜನಗರದ ಸಂತೇಮರಹಳ್ಳಿಯಲ್ಲಿ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕನ್ನಡದಲ್ಲೇ ಭಾಷಣ ಆರಂಭಿಸಿದ ಚಾಮರಾಜನಗದದ ದೇವರುಗಳು ಮತ್ತು ನಾಡಿನ ಪ್ರಮುಖರನ್ನು ಸ್ಮರಿಸಿದರು.
Related Articles
Advertisement
ರಾಹುಲ್ ಗಾಂಧಿಯವರನ್ನು ನಾಮ್‌ಧಾರ್ ಎಂದು ಕರೆದ ಮೋದಿ ತಮ್ಮ ಯಾವುದೇ ಮಾತಿನಿಂದ ಘಾಸಿಗೊಳ್ಳುವುದಿಲ್ಲ. ಅನೇಕ ವರ್ಷಗಳಿಂದ ಇದನ್ನು ಸಹಿಸಿಕೊಂಡೇ ಬಂದಿದ್ದೇವೆ.
ನಮ್ಮ ಅವಧಿಯಲ್ಲಿ 18,000 ಹಳ್ಳಿಗಳಿಗೆ ವಿದ್ಯುತ್ ನೀಡಿದ್ದೇವೆ. ಸ್ವಾತಂತ್ರ್ಯ ಬಂದು 50 ವರ್ಷಗಳ ಕಾಲ 4 ಕೋಟಿ ಕುಟುಂಬಗಳನ್ನು ಕತ್ತಲೆಯಲ್ಲಿ ಇರಿಸಿದರು.
ಅವರಿಗೆ ವಂದೇ ಮಾತರಂಗೂ ಗೌರವ ಕೊಡಲು ಗೊತ್ತಿಲ್ಲ . ದೇಶದ ಮಹಾಪುರುಷರ ಬಗ್ಗೆ ಗೌರವವಿಲ್ಲ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿದರು.
ಇಟಲಿ ಭಾಷೆಯಲ್ಲಾದ್ರೂ ಸರ್ಕಾರದ ಸಾಧನೆ ಹೇಳಿ
‘ನೀವು ಸಂಸತ್ ನಲ್ಲಿ 15 ನಿಮಿಷ ಮಾತನಾಡುವುದನ್ನು ನಿಲ್ಲಿಸಿ.ನಿಮ್ಮ ಕರ್ನಾಟಕದ ಸರ್ಕಾರದ 5 ವರ್ಷಗಳ ಸಾಧನೆಯನ್ನು 15 ನಿಮಿಷಗಳ ಕಾಲ ಹೇಳಿ. ಯಾವುದೇ ಭಾಷೆಯಲ್ಲಿ ಆದರೂ ಹೇಳಿ , ಬೇಕಾದರೆ ನಿಮ್ಮ ಮಾತ್ರಶ್ರಿಯವರ ಮಾತೃಭಾಷೆಯಲ್ಲೂ ಹೇಳಿ. ಭಾಷಣದಲ್ಲಿ 5 ಸಲ ಶ್ರೀಮಾನ್ ವಿಶ್ವೇಶ್ವರ ಯ್ಯ ಅವರ ಹೆಸರನ್ನು ಹೇಳಿ.ನೀವಿಷ್ಟು ಮಾಡಿದರೆ ನಿಮ್ಮ ಮಾತಿನಲ್ಲಿ ಒಂದು ತೂಕವಿದೆ’ ಎಂದು ಎಂದು ಲೇವಡಿ ಮಾಡಿದರು.
‘ಕರ್ನಾಟಕದಲ್ಲಿ 2+1 ಸರ್ಕಾರವಿದೆ. ಸಿದ್ದರಾಮಯ್ಯ ಅವರಿಗೆ 2 ಕ್ಷೇತ್ರ, ಅವರ ಮಗನಿಗೆ 1 ಕ್ಷೇತ್ರ, ಇನ್ನುಳಿದ ಸಚಿವರಿಗೆ 1+1 ಫಾರ್ಮುಲಾ’ ಎಂದು ಟೀಕಿಸಿದ್ದರು.