Advertisement

ಸ್ವಚ್ಛ ಭಾರತ ಅಭಿಯಾನಕ್ಕಾಗಿ ‘ಗ್ಲೋಬಲ್ ಗೋಲ್ ಕೀಪರ್’ಪ್ರಶಸ್ತಿಗೆ ಭಾಜನರಾದ ಪ್ರಧಾನಿ ಮೋದಿ

08:54 AM Sep 26, 2019 | Team Udayavani |

ನ್ಯೂಯಾರ್ಕ್: ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ನಿಂದ ಸ್ವಚ್ಚ ಭಾರತ್ ಅಭಿಯಾನಕ್ಕಾಗಿ ಪ್ರಧಾನಿ ಮೋದಿಗೆ ಗ್ಲೋಬಲ್ ಗೋಲ್ ಕೀಪರ್ ಅವಾರ್ಡ್ ಲಭಿಸಿದೆ. ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಬಿಲ್ ಗೇಟ್ಸ್ ಈ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ.

Advertisement

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಮೋದಿ, ಭಾರತೀಯ ಜನರು ಸ್ವಚ್ಛ ಭಾರತ ಅಭಿಯಾನವನ್ನು ಒಂದು ಬೃಹತ್ ಆಂದೋಲನವನ್ನಾಗಿ ಪರಿವರ್ತಿಸಿದ್ದು ಮಾತ್ರವಲ್ಲದೆ, ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಕೋಟ್ಯಾಂತರ ಭಾರತೀಯರಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ ಎಂದು ತಿಳಿಸಿದರು.

ಮಹಾತ್ಮ ಗಾಂಧೀಜಿಯವರ 150 ನೇ ಜನ್ಮಾದಿನಾಚರಣೆ ಹಿನ್ನಲೆಯಲ್ಲಿ ಸ್ವಚ್ಛ ಭಾರತ ಅಭಿಯಾನ  ಅತ್ಯಂತ ಮಹತ್ವದಾಯಕವಾಗಿದ್ದು, 130 ಕೋಟಿ ಜನರು ಈ ನಿರ್ಣಯವನ್ನು ಈಡೇರಿಸಲು ತಮ್ಮನ್ನು ತಾವು ತೊಡಗಿಸಿಕೊಂಡರೇ ಸವಾಲನ್ನು ಗೆಲ್ಲಬಹುದು ಎಂದು ತಿಳಿಸಿದರು. ಕಳೆದ ಐದು ವರುಷಗಳಲ್ಲಿ 11 ಕೋಟಿಗೂ ಅಧಿಕ ಶೌಚಾಲಯ ನಿರ್ಮಿಸಿದ್ದೇವೆ. ಇದರಿಂದ ಮಹಿಳೆಯರಿಗೆ ಬಹಳ ಅನುಕೂಲವಾಗಿದೆ. ಶೌಚಾಲಯಗಳ ಕೊರತೆಯಿಂದ ಹಲವು ಹೆಣ್ಣುಮಕ್ಕಳು ಶಾಲೆಯನ್ನು ಅರ್ಧದಲ್ಲೇ ಬಿಡಬೇಕಾಯಿತು. ಈ ಸಮಸ್ಯೆಯನ್ನು ಮನಗಂಡು ಶಾಲೆಗಳಲ್ಲಿ ಸಮರ್ಪಕ ಶೌಚಾಲಯಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next