Advertisement

ಚೀನ ಅಧ್ಯಕ್ಷರಿಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆ ಯಾವುದು ಗೊತ್ತಾ ? ಏನಿದರ ವಿಶೇಷತೆ ?

09:42 AM Oct 13, 2019 | Team Udayavani |

ಮಹಾಬಲಿಪುರಂ : ಭಾರತ ಮತ್ತು ಚೀನ ದೇಶದ ಮಹಾ ನಾಯಕರಾದ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಅವರ ಸ್ನೇಹ ಸಮ್ಮಿಲನಕ್ಕೆ ತಮಿಳುನಾಡಿನ ಮಹಾಬಲಿಪುರಂ ಸಾಕ್ಷಿಯಾಗಿದೆ. ಈ ವೇಳೆ ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ  ಚಿನ್ನ ಲೇಪಿತ  ಅಣ್ಣಂ ದೀಪ ಮತ್ತು ತಾಂಜಾವೂರ್ ಶೈಲಿಯಲ್ಲಿರುವ ನೃತ್ಯ ಸರಸ್ವತಿಯ ಕಲಾಕೃತಿಯನ್ನು   ಉಡುಗೊರೆಯಾಗಿ ನೀಡಿದ್ದಾರೆ.

Advertisement

ಅಣ್ಣಂ ದೀಪ 6 ಅಡಿ ಎತ್ತರವಿದ್ದು ಇದನ್ನು ನಾಚಿಯಾರ್​ ಕೊಯಿಲ್ ಸಮುದಾಯದ ಎಂಟು ಜನರ ತಂಡ ಕಂಚಿನಿಂದ ತಯಾರಿಸಿದೆ. ಇದನ್ನು ಸಿದ್ದಪಡಿಸಲು 12 ದಿನಗಳು ಬೇಕಾಯಿತು ಎಂದು ಅವರು ತಿಳಿಸಿದ್ದಾರೆ. ಇದು 108 ಕೆ.ಜಿ. ತೂಕವಿದೆ. ತಮಿಳುನಾಡು ಕರಕುಶಲ ಅಭಿವೃದ್ಧಿ ನಿಗಮವು ಈ ದೀಪ ಮತ್ತು ಕಲಾಕೃತಿಯನ್ನು ಜಿನ್​ಪಿಂಗ್​ಗೆ ಉಡುಗೊರೆಯಾಗಿ ತಂದಿತ್ತು.

ನೃತ್ಯ ಸರಸ್ವತಿದೇವಿ ಕಲಾಕೃತಿಯನ್ನು ಕಲಾವಿದ ಬಿ.ಲೋಕನಾಥ್ ಬಿಡಿಸಿದ್ದಾರೆ. ಇದು 3 ಅಡಿ ಎತ್ತರ ಮತ್ತು 4 ಅಡಿ ಅಗಲವನ್ನು ಹೊಂದಿದ್ದು 40 ಕೆ.ಜಿ. ತೂಕವಿದೆ. ಈ ಕಲಾಕೃತಿ 45 ದಿನದಲ್ಲಿ ತಯಾರಾಗಿದೆ. ನೃತ್ಯ ಮಾಡುವ ಸರಸ್ವತಿಯನ್ನು ಜ್ಞಾನ, ಸಂಗೀತ, ಕಲೆ, ಪ್ರಕೃತಿ ಮತ್ತು ಬುದ್ಧಿವಂತಿಕೆಯ ಸಾಕಾರವೆಂದು ಪರಿಗಣಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next