Advertisement

ಕೆವಾಡಿಯಾ ಏಕತಾ ಪ್ರತಿಮೆಗೆ ಸಂಪರ್ಕ ಕಲ್ಪಿಸುವ ಎಂಟು ರೈಲುಗಳಿಗೆ ಪ್ರಧಾನಿ ಚಾಲನೆ

02:15 PM Jan 17, 2021 | Team Udayavani |

ಹೊಸದಿಲ್ಲಿ: ಗುಜರಾತ್ ರಾಜ್ಯದ ಕೆವಾಡಿಯಾದಲ್ಲಿನ ಸರ್ದಾರ್ ವಲ್ಲಭಾಭಾಯಿ ಅವರ ಪ್ರತಿಮೆಗೆ ದೇಶದ ವಿವಿಧೆಡೆಯಿಂದ ಸಂಪರ್ಕ ಕಲ್ಪಿಸುವ ಎಂಟು ರೈಲುಗಳಿಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಅವರು, “ಕೆವಾಡಿಯಾ ಬುಡಕಟ್ಟು ಸಮುದಾಯದ ಜೀವನವನ್ನು ಬದಲಿಸಲು ಸಹ ಇದು ಸಹಾಯ ಮಾಡುತ್ತದೆ” ಎಂದು ಹೇಳಿದರು.

ಕೆವಾಡಿಯಾ-ವಾರಣಾಸಿ ಮಹಾಮನ ಎಕ್ ಪ್ರೆಸ್ (ವಾರದಲ್ಲಿ ಒಂದು ದಿನ), ದಾದರ್-ಕೆವಾಡಿಯಾ ಎಕ್ ಪ್ರೆಸ್ (ಪ್ರತಿದಿನ), ಅಹಮದಾಬಾದ್-ಕೆವಾಡಿಯಾ ಜನಶತಾಬ್ದಿ ಎಕ್ ಪ್ರೆಸ್ (ಪ್ರತಿದಿನ) ನಿಜಾಮುದ್ದೀನ್ – ಕೆವಾಡಿಯಾ ಎಕ್ ಪ್ರೆಸ್ (ವಾರಕ್ಕೆ 2 ಬಾರಿ) ಕೆವಾಡಿಯಾ – ರೇವಾ ಎಕ್ ಪ್ರೆಸ್ (ವಾರದಲ್ಲಿ ಒಂದು ದಿನ), ಚೆನ್ನೈ – ಕೆವಾಡಿಯಾ ಎಕ್ ಪ್ರೆಸ್ (ವಾರದಲ್ಲಿ ಒಂದು ದಿನ), ಪ್ರತಾಪನಗರ-ಕೆವಾಡಿಯಾ ಎಂಇಎಂಯು ರೈಲು (ಪ್ರತಿದಿನ) ಮತ್ತು ಕೆವಾಡಿಯಾ-ಪ್ರತಾಪನಗರ ಎಂಇಎಂಯು ರೈಲು (ಪ್ರತಿದಿನ) ಗಳಿಗೆ ಮೋದಿಯವರು ಚಾಲನೆ ನೀಡಿದ್ದಾರೆ.

ಇದನ್ನೂ ಓದಿ:ಏಪ್ರಿಲ್ ಬಳಿಕ ಯಡಿಯೂರಪ್ಪರನ್ನು ಅಧಿಕಾರದಿಂದ ತೆಗೆಯುತ್ತಾರೆ: ಸಿದ್ದರಾಮಯ್ಯ

ರೈಲ್ವೆ ಸಚಿವ ಪಿಯೂಷ್ ಗೋಯಲ್, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ಅವರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next