Advertisement

ದೀರ್ಘಾವಧಿ ರಫ್ತಿಗೆ ಯೋಜನೆಗಳನ್ನು ರೂಪಿಸಿ: ಉದ್ಯಮಿಗಳಿಗೆ ಮೋದಿ

09:14 PM Jun 23, 2022 | Team Udayavani |

ನವದೆಹಲಿ: ಭಾರತದ ಉದ್ದಿಮೆಗಳು, ಉದ್ಯಮಿಗಳು ವಿದೇಶಗಳಿಗೆ ದೀರ್ಘಾವಧಿಯವರೆಗೆ ರಫ್ತು ಮಾಡಲು ದಾರಿ ಕಂಡುಕೊಳ್ಳಬೇಕು. ಅದಕ್ಕೆ ಸರ್ಕಾರವೇನು ಮಾಡಬೇಕು ಎಂಬ ಸಲಹೆಗಳನ್ನೂ ದಯವಿಟ್ಟು ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

Advertisement

ದೆಹಲಿಯಲ್ಲಿ ಹೊಸ ವಾಣಿಜ್ಯ ಭವನ ಉದ್ಘಾಟಿಸಿದ ವೇಳೆ ಅವರು ಈ ಮಾತುಗಳನ್ನು ಆಡಿದರು. ರಫ್ತು ಹೆಚ್ಚಾಗುತ್ತ ಹೋದ ಹಾಗೆ ಒಂದು ದೇಶದ ಸ್ಥಿತಿ ಬದಲಾಗುತ್ತದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಬದಲಾಗುತ್ತದೆ. ಈ ಹಿನ್ನೆಲೆಯಲ್ಲಿ ಉದ್ಯಮಿಗಳು ಚಿಂತಿಸಬೇಕು ಎಂದರು.

ಇದೇ ವೇಳೆ ಭಾರತದ ರಫ್ತುಸ್ಥಿತಿಯ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಇಡೀ ಜಗತ್ತಿನಲ್ಲಿ ಎಲ್ಲ ಕಡೆ ಪರಿಸ್ಥಿತಿ ಹದಗೆಟ್ಟಿದ್ದರೂ, 2021-22ರ ಸಾಲಿನಲ್ಲಿ ಭಾರತದ ಸರಕು ಮತ್ತು ಸೇವಾ ರಫ್ತುಪ್ರಮಾಣ 50 ಲಕ್ಷ ಕೋಟಿ ರೂ.ಗಳಾಗಿತ್ತು. ಬರೀ ಸರಕಿನ ರಫ್ತು ಪ್ರಮಾಣವೇ 31 ಲಕ್ಷ ಕೋಟಿ ರೂ.ಗಳಾಗಿದ್ದವು. ಇದು ನಮ್ಮ ಗುರಿಗಿಂತ ಹೆಚ್ಚಿನ ಸಾಧನೆ ಎಂದು ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next