ಭೋಪಾಲ್ (ಮಧ್ಯಪ್ರದೇಶ): ಏಕಮಾತ್ರ ಹಳೆಯ ಕಾಂಗ್ರೆಸ್ ಪಕ್ಷ ನಿಷ್ಪ್ರಯೋಜಕ ತುಕ್ಕುಹಿಡಿದ ಕಬ್ಬಿಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:Cauvery issue ಕನ್ನಡ ಸಂಘಟನೆ ಒಕ್ಕೂಟದಿಂದ ಸೆ.29ರಂದು ಕರ್ನಾಟಕ ಬಂದ್: ವಾಟಾಳ್ ನಾಗರಾಜ್
ಸೋಮವಾರ (ಸೆಪ್ಟೆಂಬರ್ 25) ಭೋಪಾಲ್ ನ ಜಾಂಬೋರಿ ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರಿದ ಅವರು ಕಾಂಗ್ರೆಸ್ ಕೇವಲ ತನ್ನ ಕುಟುಂಬದ ಏಳಿಗೆಗಾಗಿ ಮಾತ್ರ ಯೋಚಿಸುತ್ತಿದೆ ವಿನಃ ದೇಶದ ಜನರ ಅಭಿವೃದ್ಧಿ ಬಗ್ಗೆ ಅಲ್ಲ ಎಂದರು.
ಕಾಂಗ್ರೆಸ್ ನೇತೃತ್ವದ ಘಮಂಡಿಯಾ ಘಟಬಂಧನ್ ಮಹಿಳಾ ಮೀಸಲು ಮಸೂದೆಗೆ ಅರ್ಧ ಮನಸ್ಸಿನಿಂದ ಮತ ಚಲಾಯಿಸಿರುವುದಾಗಿ ಪ್ರಧಾನಿ ಮೋದಿ ಆರೋಪಿಸಿದರು. ವಿಪಕ್ಷಗಳ ಬಗ್ಗೆ ಮಹಿಳೆಯರು ಎಚ್ಚರದಿಂದ ಇರಬೇಕು, ಅವರು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆಯಲು ಹೊರಟಿದ್ದಾರೆ ಎಂದು ಪ್ರಧಾನಿ ಮೋದಿ ಟೀಕಿಸಿದರು.
ಕಾಂಗ್ರೆಸ್ ಪಕ್ಷ ನಗರ ನಕ್ಸಲೀಯರಿಂದ ಆಡಳಿತ ನಡೆಸುತ್ತಿದೆ ಎಂದು ಪ್ರಧಾನಿ ತಿಳಿಸಿದ್ದು, ಕಾಂಗ್ರೆಸ್ ಅಭಿವೃದ್ಧಿ ವಿರೋಧಿ ಪಕ್ಷವಾಗಿದೆ. ದೇಶವನ್ನು 20ನೇ ಶತಮಾನಕ್ಕೆ ತಳ್ಳುವ ಯತ್ನ ಕಾಂಗ್ರೆಸ್ ಮಾಡುತ್ತಿದೆ. ವಿಪಕ್ಷಗಳಿಗೆ ಅಧಿಕಾರದ ದಾಹ ಬಿಟ್ಟರೆ ಯಾವುದೇ ದೂರದೃಷ್ಟಿ ಇಲ್ಲ ಎಂದು ಹೇಳಿದರು.