Advertisement

ಇಂಡಿಯಾ ಫ‌ಸ್ಟ್‌; ಫ್ಯಾಮಿಲಿ ಫ‌ಸ್ಟ್‌ ಅಲ್ಲ: ದೇಶದ ಜನರಿಗೆ ಮೋದಿ ಕರೆ

05:27 AM Mar 20, 2019 | udayavani editorial |

ಹೊಸದಿಲ್ಲಿ : ‘ಇಂಡಿಯಾ ಫ‌ಸ್ಟ್‌; ಫ್ಯಾಮಿಲಿ ಫ‌ಸ್ಟ್‌ ಅಲ್ಲ’ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ವಂಶಾಡಳಿತೆಯ ಕಾಂಗ್ರೆಸ್‌ ವಿರುದ್ಧ ತನ್ನ ವಾಕ್ಸಮರವನ್ನು ಮುಂದುವರಿಸಿದ್ದಾರೆ. 

Advertisement

‘ದೇಶದ ಜನರು ತಮ್ಮ ತಾಯ್ನಾಡಿಗೇ ಮೊದಲ ಆದ್ಯತೆ ನೀಡಿ ಇಂಡಿಯಾ ಫ‌ಸ್ಟ್‌ ಎಂಬ ಚಿಂತನೆಯನ್ನು ಬಲಪಡಿಸಬೇಕು; ಆಗಲೇ ದೇಶದ ಅಭಿವೃದ್ದಿ ಸಾಧ್ಯವಾಗುವುದು. ಫ್ಯಾಮಿಲಿ ಫ‌ಸ್ಟ್‌ ಎಂಬ ಚಿಂತನೆಯನ್ನು ರೂಢಿಸಿಕೊಂಡರೆ ಕೇವಲ ಒಂದು ನಿರ್ದಿಷ್ಟ ಕುಟುಂಬ (ಗಾಂಧಿ ಕುಟುಂಬ)ಕ್ಕೆ ಮಾತ್ರವೇ ಲಾಭವಾದೀತು’ ಎಂದು ಪ್ರಧಾನಿ ಮೋದಿ ತಮ್ಮ ಬ್ಲಾಗ್‌ ನಲ್ಲಿ  ಬರೆದಿದ್ದಾರೆ ಮತ್ತು ಈ ಬಗ್ಗೆ ಜನರು ಬುದ್ಧಿವಂತಿಕೆ ಮತ್ತು ವಿವೇಕದಿಂದ ನಡೆದುಕೊಳ್ಳಬೇಕು ಎಂದು ವಿನಂತಿಸಿದ್ದಾರೆ. 

1,165 ಪದಗಳ ಸುದೀರ್ಘ‌ ಬ್ಲಾಗ್‌ನಲ್ಲಿ ಪ್ರಧಾನಿ ಮೋದಿ ಅವರು ಕಳೆದ 2014ರ ಮಹಾ ಚುನಾವಣೆಯ ಸಂದರ್ಭದಲ್ಲಿ ತಾನು ವಿಕಾಸಕ್ಕಾಗಿ ಮತ್ತು ಅಡೆತಡೆಗಳ ಹೊರತಾಗಿಯೂ ಅವಕಾಶಗಳಿಗಾಗಿ ಮತ ಹಾಕುವಂತೆ ಜನರನ್ನು ಕೋರಿಕೊಂಡದ್ದನ್ನು ನೆನಪಿಸಿಕೊಂಡಿದ್ದಾರೆ. 

ಕಳೆದ ಐದು ವರ್ಷಗಳ ಎನ್‌ಡಿಎ ಆಡಳಿತೆಯಲ್ಲಿ ದೇಶವು ಶೌಚಾಲಯ, ಬ್ಯಾಂಕಿಂಗ್‌, ಹಣಕಾಸು, ಭವಿಷ್ಯತ್ತಿನ ಮೂಲ ಸೌಕರ್ಯಗಳ ನಿರ್ಮಾಣ ಮತ್ತು ಬಡ ಜನರ ಆರೋಗ್ಯ ಕಲ್ಯಾಣ, ಯುವಕರಿಗೆ ಉನ್ನತ ಶಿಕ್ಷಣ ಮುಂತಾಗಿ ಹಲವಾರು ರಂಗಗಳಲ್ಲಿ ಅದ್ಭುತ ಸಾಧನೆಯನ್ನು ಮಾಡಿದೆ ಎಂದು ಮೋದಿ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next