Advertisement

ಚುನಾವಣೆಯವರೆಗೆ ಮೋದಿ ಸಿನೆಮಾ ಇಲ್ಲ

10:12 AM Apr 12, 2019 | Team Udayavani |

ಹೊಸದಿಲ್ಲಿ /ನಾಗ್ಪುರ: ಪ್ರಧಾನಿ ನರೇಂದ್ರ ಮೋದಿ ಜೀವನ ಚರಿತ್ರೆ ಆಧಾರಿತ ಎಂದು ಹೇಳಲಾಗುವ “ಪಿಎಂ ನರೇಂದ್ರ ಮೋದಿ’ ಬಯೋಪಿಕ್‌ (ಸಿನೆಮಾ) ಬಿಡುಗಡೆಗೆ ಚುನಾವಣ ಆಯೋಗ ಬುಧವಾರ ತಡೆ ನೀಡಿದೆ. ದೇಶದಲ್ಲಿ ಸದ್ಯ ನಡೆಯುತ್ತಿರುವ ಚುನಾವಣ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಅದರ ಬಿಡುಗಡೆ ಬೇಡ ಎಂದು ಹೇಳಿದೆ. ಈ ನಿಯಮ “ನಮೋ ಟಿವಿ’ಗೂ ಅನ್ವಯವಾಗುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

Advertisement

ಬಯೋಪಿಕ್‌ ಬಿಡುಗಡೆಯಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲವಾದರೂ ಇತರರಿಗೆ ಸಮಾನ ಅವಕಾಶ ಸಿಗುವುದಿಲ್ಲ. ಹೀಗಾಗಿ ಇಂಥ ಕ್ರಮ ಅಗತ್ಯ ಎಂದು ಆಯೋಗ ತನ್ನ ನಿರ್ಧಾರಕ್ಕೆ ಸ್ಪಷ್ಟನೆ ನೀಡಿದೆ. “ಯಾವುದೇ ಪೋಸ್ಟರ್‌ ಮತ್ತು ಪ್ರಚಾರದಲ್ಲಿರುವ ಅಂಶಕ್ಕೆ ಮಾನ್ಯತೆ ಸಿಕ್ಕಿದರೂ ನಿಗದಿತ ಅಭ್ಯರ್ಥಿಯ ಬಗ್ಗೆ ವಿವರಣೆ ಹೊಂದಿರುವ ಹಿನ್ನೆಲೆಯಲ್ಲಿ ಅದು ಪರೋಕ್ಷವಾಗಿ ಅಥವಾ ಅಪರೋಕ್ಷವಾಗಿ ಪರಿಣಾಮ ಬೀರುತ್ತದೆ’ ಎಂದು ಆಯೋಗ ಹೇಳಿಕೊಂಡಿದೆ. ಸುಪ್ರೀಂಕೋರ್ಟ್‌ ಮಂಗಳವಾರ ಸಿನೆಮಾ ಬಿಡುಗಡೆಗೆ ಅಡ್ಡಿ ಮಾಡುವುದಿಲ್ಲ ಎಂದು ಹೇಳಿತ್ತು.

ಚುನಾವಣ ಆಯೋಗದ ನಿರ್ಧಾರದ ಹಿನ್ನೆಲೆಯಲ್ಲಿ ಬಯೋಪಿಕ್‌ನಲ್ಲಿ ಪ್ರಧಾನ ಪಾತ್ರ ವಹಿಸಿರುವ ನಟ ವಿವೇಕ್‌ ಒಬೆರಾಯ್‌ ನಾಗ್ಪುರದಲ್ಲಿ ಹೊಸ ಸಿನೆಮಾ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿ ರದ್ದುಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next