Advertisement

2ಜಿ ಯುಗ ಭ್ರಷ್ಟಾಚಾರದ ಸಂಕೇತವಾಗಿತ್ತು, ಈಗ ಪಾರದರ್ಶಕತೆ ಇದೆ: ಪ್ರಧಾನಿ

02:36 PM May 17, 2022 | Team Udayavani |

ನವದೆಹಲಿ: ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಸ್ಥಳೀಯವಾಗಿ ಪರೀಕ್ಷಿಸಲು ಮತ್ತು ಮೌಲ್ಯೀಕರಿಸಲು ಮತ್ತು ವಿದೇಶಿ ಸೌಲಭ್ಯಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ದೇಶದ ಮೊದಲ 5G ಟೆಸ್ಟ್‌ಬೆಡ್ ಅನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದರು.

Advertisement

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ರಜತ ಮಹೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಂಪರ್ಕವು 21 ನೇ ಶತಮಾನದಲ್ಲಿ ದೇಶದ ಪ್ರಗತಿಯನ್ನು ನಿರ್ಧರಿಸುತ್ತದೆ ಎಂದು ಹೇಳಿದರು.

“5G ನಮ್ಮ ಆರ್ಥಿಕತೆಗೆ 450 ಶತಕೋಟಿ ಡಾಲರ್ ಕೊಡುಗೆ ನೀಡುತ್ತದೆ. ಇದು ಇಂಟರ್ನೆಟ್ ವೇಗವನ್ನು ಮಾತ್ರವಲ್ಲದೆ ಅಭಿವೃದ್ಧಿಯನ್ನೂ ಹೆಚ್ಚಿಸುತ್ತದೆ ಎಂದರು.

ಈ ದಶಕದ ಅಂತ್ಯದ ವೇಳೆಗೆ, ನಾವು 6G ಸೇವೆಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ ಮತ್ತು ನಮ್ಮ ಕಾರ್ಯಪಡೆಯು ಅದರ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆ, ”ಎಂದರು.

ಇದನ್ನೂ ಓದಿ : ಬಿಹಾರ ರಾಜ್ಯಸಭಾ ಚುನಾವಣೆ ರೇಸ್‌ನಲ್ಲಿ ಕನ್ನಡಿಗ; ಕುಂದಾಪುರದ ಅನಿಲ್‌ ಹೆಗ್ಡೆ JDU ಅಭ್ಯರ್ಥಿ

Advertisement

ಭಾರತದಲ್ಲಿ ಟೆಲಿಡೆನ್ಸಿಟಿ ಮತ್ತು ಇಂಟರ್ನೆಟ್ ಬಳಕೆದಾರರು ವೇಗವಾಗಿ ವಿಸ್ತರಿಸುತ್ತಿದೆ ಎಂದು ಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “2ಜಿ ಯುಗ ನೀತಿ ಪಾರ್ಶ್ವವಾಯು, ಭ್ರಷ್ಟಾಚಾರದ ಸಂಕೇತವಾಗಿತ್ತು ಈಗ ರಾಷ್ಟ್ರವು ಪಾರದರ್ಶಕವಾಗಿ 4ಜಿ ಮತ್ತು ಈಗ 5ಜಿಗೆ ಸಾಗಿದೆ ಎಂದರು.

“ಭಾರತದಲ್ಲಿ ಮೊಬೈಲ್ ಉತ್ಪಾದನಾ ಘಟಕಗಳು 2 ರಿಂದ 200 ಕ್ಕೆ ವಿಸ್ತರಿಸಿದ್ದು, ಭಾರತ ಇಂದು ವಿಶ್ವದ ಅತಿದೊಡ್ಡ ಮೊಬೈಲ್ ಉತ್ಪಾದನಾ ಕೇಂದ್ರವಾಗಿದೆ. ಭಾರತವು ಆರೋಗ್ಯಕರ ಸ್ಪರ್ಧೆಯನ್ನು ಪ್ರೋತ್ಸಾಹಿಸಿದ್ದು, ಅದು “ಅಗ್ಗದ ಟೆಲಿಕಾಂ ಡೇಟಾ ಶುಲ್ಕಗಳನ್ನು ಹೊಂದಿರುವ ದೇಶಕ್ಕೆ ಕಾರಣವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next