ಹೊಸದಿಲ್ಲಿ: ಸಾಮಾಜಿಕ ನ್ಯಾಯ ಪಖವಾಢಾ (ಸಂಸದರಿಂದ 15 ದಿನಗಳಿಗೊಮ್ಮೆ ಮನೆಮನೆ ಭೇಟಿ) ಯೋಜನೆಯಡಿ ಬಿಜೆಪಿ ಸಂಸದರು, ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು…
ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಕರೆ ನೀಡಿದ್ದಾರೆ. ಏ.6 ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನ. ಈ ದಿನ ಜನರಿಗೆ ಕೇಂದ್ರ ಸರಕಾರದ ಕಾರ್ಯಕ್ರಮಗಳನ್ನು ತಿಳಿಸಬೇಕು. ಎ.14ರಂದು ಸಂವಿಧಾನ ಶಿಲ್ಪಿ ಡಾ| ಬಿ. ಆರ್.ಅಂಬೇಡ್ಕರ್ ಜನ್ಮದಿನ.
ಅಂದು ದೇಶವನ್ನು ಇದುವರೆಗೆ ಆಳಿದ ಎಲ್ಲ ಪ್ರಧಾನಿಗಳ ಕೊಡುಗೆಯನ್ನು ತಿಳಿಸುವ ಸಂಗ್ರಹಾಲಯವನ್ನು ಆರಂಭಿಸಲಾಗುವುದು. ಅಂದೂ ಕೂಡ ಸಮಾಜದ ಹಿಂದುಳಿದ ವರ್ಗಗಳಿಗೆ ಕೇಂದ್ರ ನೀಡಿರುವ ಕೊಡುಗೆಗಳನ್ನು ವಿವರಿಸಬೇಕು. ಹಿಂದುಳಿ ದವರಿಗಾಗಿ ಮನೆಗಳ ನಿರ್ಮಾಣ, ಪೌಷ್ಟಿಕ ಆಹಾರ ಹಂಚಿಕೆ, ಉಚಿತ ಧಾನ್ಯ ವಿತರಣೆ ಗಳಂತಹ ಯೋಜನೆಗಳನ್ನು ಗಮನಕ್ಕೆ ತನ್ನಿ ಎಂದು ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಗೆ ಸಿದ್ದು ಅನಿವಾರ್ಯ.. ಅವರಿಲ್ಲ ಎಂದರೆ ಪಕ್ಷವೇ ಇಲ್ಲ ಎಂದರ್ಥ :ಕೆ.ಎನ್. ರಾಜಣ್ಣ
ಕೇಂದ್ರದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಪಕ್ಷ ಮಾತ್ರ ಪಕ್ಷಾತೀತವಾಗಿ ಇದುವರೆಗೆ ದೇಶವನ್ನಾಳಿದ ಪ್ರಧಾನಿ ಗಳನ್ನು ಸ್ಮರಿಸುವ ಕೆಲಸ ಮಾಡಿದೆ. ಅಧಿಕಾರದಲ್ಲಿದ್ದ ಕಾಂಗ್ರೆಸ್ ಕೇವಲ ನೆಹರೂ-ಗಾಂಧಿ ಕುಟುಂಬದ ಪ್ರಧಾನಿ ಗಳನ್ನು ಮಾತ್ರ ವೈಭವೀಕರಿಸಿತ್ತು ಎಂದು ಮೋದಿ ಕಿಡಿಕಾರಿದ್ದಾರೆ.