Advertisement
ಬಳಿಕ ಈ ಕುರಿತು ತಮ್ಮ X ಖಾತೆಯಲ್ಲಿ ಭೇಟಿ ನೀಡಿದ ವಿಚಾರವನ್ನು ಹಂಚಿಕೊಂಡಿದ್ದಾರೆ ಪ್ರಧಾನಿ ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆಗಿದ್ದರು.
ಎರಡು ದಿನಗಳ ಭೇಟಿಗಾಗಿ ವಾರಣಾಸಿಗೆ ಬಂದಿರುವ ಪ್ರಧಾನಿ ಅವರು ಇಂದು 13,202 ಕೋಟಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾಡಳಿತದ ಹಿರಿಯ ಅಧಿಕಾರಿ, ಇಂದು ಪ್ರಧಾನಿಯವರು 11,972 ಕೋಟಿ ಮೌಲ್ಯದ 24 ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಜೊತೆಗೆ 2,195 ಕೋಟಿ ಮೌಲ್ಯದ 12 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
Related Articles
Advertisement
ಇದಾದ ಬಳಿಕ ಪ್ರಧಾನಮಂತ್ರಿಯವರು ಬಿಎಚ್‌ಯುನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, ಅಲ್ಲಿ ಅವರು ಕಾಶಿ ಸಂಸದ್ ಜ್ಞಾನ ಪ್ರತಿಯೋಗಿತಾ, ಕಾಶಿ ಸಂಸದ್ ಛಾಯಾಗ್ರಹಣ ಪ್ರತಿಯೋಗಿತಾ ಮತ್ತು ಕಾಶಿ ಸಂಸದ್ ಸಂಸ್ಕೃತ ಪ್ರತಿಯೋಗಿತಾ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ವಾರಣಾಸಿಯ ಸಂಸ್ಕೃತ ವಿದ್ಯಾರ್ಥಿಗಳಿಗೆ ಪುಸ್ತಕಗಳು, ಸಮವಸ್ತ್ರದ ಸೆಟ್‌ಗಳು, ಸಂಗೀತ ವಾದ್ಯಗಳು ಮತ್ತು ಮೆರಿಟ್ ವಿದ್ಯಾರ್ಥಿವೇತನವನ್ನು ವಿತರಿಸುತ್ತಾರೆ ಮತ್ತು ಭಾಗವಹಿಸುವವರ ಜೊತೆ ‘ಸನ್ವರ್ತಿ ಕಾಶಿ’ ವಿಷಯದ ಕುರಿತು ತಮ್ಮ ಛಾಯಾಚಿತ್ರ ವಿಚಾರದ ಬಗ್ಗೆಯೂ ಸಂವಾದ ನಡೆಸುತ್ತಾರೆ.
“ಪ್ರಧಾನಿ ಮೋದಿ ಅವರು ಸೀರ್ಗೋವರ್ಧನ್‌ನಲ್ಲಿರುವ ಸಂತ ರವಿದಾಸ್ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ, ಬಳಿಕ ಸಂತ ರವಿದಾಸ್ ಜನ್ಮಸ್ಥಳದ ಸುತ್ತಮುತ್ತ ಸುಮಾರು 32 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಸಂತ ರವಿದಾಸ್ ಪ್ರತಿಮೆ ಅನಾವರಣ, ವಸ್ತುಸಂಗ್ರಹಾಲಯದ ಶಂಕುಸ್ಥಾಪನೆ ಮತ್ತು ಸುಮಾರು 62 ಕೋಟಿ ವೆಚ್ಚದ ಉದ್ಯಾನವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅವರು ಉದ್ಘಾಟಿಸಲಿದ್ದಾರೆ ಎಂದು ಕಾಶಿ ಪ್ರದೇಶ ಬಿಜೆಪಿ ಅಧ್ಯಕ್ಷ ದಿಲೀಪ್ ಪಟೇಲ್ ತಿಳಿಸಿದರು.