ಕೊಲಂಬೊ: ಐಸಿಸ್ ಉಗ್ರರು ಈಸ್ಟರ್ ಭಾನುವಾರ ಆತ್ಮಾಹುತಿ ದಾಳಿ ನಡೆಸಿ 300 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ನಂತರ ಶ್ರೀಲಂಕಾಕ್ಕೆ ಭೇಟಿ ನೀಡಿದ ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ.
ಭಾನುವಾರ ಬೆಳಗ್ಗೆ 11.30 ರ ವೇಳೆಗೆ ಕೊಲಂಬೊ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಂಕಾ ಲಂಕಾ ಪ್ರಧಾನಿ ನಾಯಕ ರಣಿಲ್ ವಿಕ್ರಮಸಿಂಘೆ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಪ್ರಧಾನಿ ಮೋದಿ ಅವರು ಶ್ರೀಲಂಕಾ ಅಧ್ಯಕ್ಷ ಮೈತ್ರಿ ಪಾಲ ಸಿರಿಸೇನಾ ಕಾರ್ಯಾಲಯದಲ್ಲಿ ಸಸಿ ನೆಡಲಿದ್ದಾರೆ. ಬಳಿಕ ಭೋಜನ ಸವಿಯಲಿದ್ದಾರೆ.
ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಷೆ ಅವರೊಂದಿಗೂ ಮಾತುಕತೆ ನಡೆಸಲಿದ್ದಾರೆ.
ತಮಿಳು ರಾಷ್ಟ್ರೀಯ ಮೈತ್ರಿಕೂಟದ ನಾಯಕರೊಂದಿಗೂ ಮಾತುಕತೆ ನಡೆಸಲಿದ್ದಾರೆ.
2 ಗಂಟೆಗೆ ಕೊಲಂಬೋದಲ್ಲಿರುವ ಭಾರತೀಯ ಸಮುದಾಯದವರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಸಂಜೆ 3 ಗಂಟೆಗೆ ಲಂಕಾದಿಂದ ಹೊರಟು ತಿರುಪತಿ ತಿರುಮಲ ದೇಗುಲದತ್ತ ಆಗಮಿಸುತ್ತಾರೆ. ಸಂಜೆ ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದು , ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಪ್ರಧಾನಿ ಮೋದಿ ಅವರ ಜೊತೆಗೆ ದೇಗುಲಕ್ಕೆ ತೆರಳಲಿದ್ದಾರೆ.