Advertisement
ತಮ್ಮ ಪ್ರವಾಸದ ಮೊದಲ ದಿನ ಮೋದಿ ಅವರು ಐರೋಪ್ಯ ಕೌನ್ಸಿಲ್ ಮತ್ತು ಐರೋಪ್ಯ ಕಮಿಷನ್‌ನ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದಾರೆ. ಅ. 29ರಿಂದ 31ರ ವರೆಗೆ ಅವರು ರೋಮ್ ಮತ್ತು ವ್ಯಾಟಿಕನ್ ಸಿಟಿಯಲ್ಲಿ ಇರಲಿದ್ದಾರೆ. ಶನಿವಾರ ಮೋದಿ ವ್ಯಾಟಿಕನ್ ಸಿಟಿಗೆ ತೆರಳಿ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ರೋಮ್ ತಲುಪಿದೊಡನೆಯೇ ಪ್ರಧಾನಿ ಮೋದಿ ಗಾಂಧೀಜಿಯ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಅಲ್ಲಿ ನೆರೆದಿದ್ದ ಭಾರತೀಯ ಸಮುದಾಯವು ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತ ಮೋದಿ ಅವರನ್ನು ಸ್ವಾಗತಿಸಿತು. ಮೋದಿ ಕೈಮುಗಿದು “ಓಂ ನಮಃ ಶಿವಾಯ’ ಎಂದು ಪ್ರತಿಕ್ರಿಯಿಸಿದರು.
Related Articles
Advertisement