ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2022ರ ಕೊನೆಯ ಮನ್ ಕೀ ಬಾತ್ ನಲ್ಲಿ ಮಾತನಾಡಿದರು. ಕೋವಿಡ್ ಕಾಳಜಿಯ ಬಗ್ಗೆ ಮಾತನಾಡಿದ ಪ್ರಧಾನಿ ಇದೇ ವೇಳೆ ರಾಜ್ಯದ ಸಾಧಕರ ಬಗ್ಗೆಯೂ ಉಲ್ಲೇಖ ಮಾಡಿದರು.
ಗದಗ ಮೂಲದ ಕಾವೇಂಶ್ರೀ ಅವರ ಸಾಧನೆಯ ಬಗ್ಗೆ ಮೋದಿ ಮೆಚ್ಚುಗೆಯ ಮಾತನಾಡಿದರು.
ಕಾವೇಂಶ್ರೀ (ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ) ಅವರು ಈ ಹಿಂದೆ ಗದಗ ರೆಸ್ಟೋರೆಂಟ್‌ನಲ್ಲಿ ಮ್ಯಾನೇಜರ್ ಆಗಿದ್ದರು. ಕಾವೇಂಶ್ರೀ ಅವರು ಕಳೆದ 1996ರಲ್ಲಿ ಕಲಾ ಪೋಷಣಿಯ ಸಲುವಾಗಿ ಕಲಾ ಚೇತನ ವೇದಿಕೆಯನ್ನು ಸ್ಥಾಪಿಸಿದರು. ಇದು ಕಲೆ ಮತ್ತು ಸಂಸ್ಕೃತಿಯ ರಕ್ಷಣಿಗೋಸ್ಕರ ಕಳೆದ 26 ವರ್ಷಗಳಿಂದ ಕಲಾ ಚೇತನ ವೇದಿಕೆಯ ಮೂಲಕ ತಪೋ ಸದೃಶ ಕೊಡುಗೆ ನೀಡಿದ್ದಾರೆ, ಅವೇಶ ಕಾರ್ಯಕ್ರಮಗಳ ಮೂಲಕ ಸಾಂಸ್ಕೃತಿಕ ಪೋಷಣೆಯ ಕೆಲಸ ಮಾಡಿದ್ದಾರೆ. ಸ್ಥಳೀಯ ವಾಗಿ ಸಂಸ್ಕೃತಿಯ ರಕ್ಷಣಿಗೆ ಅವರ ಕೊಡುಗೆ ದೊಡ್ಡದು ಎನ್ನುತ್ತಾರೆ ಮೋದಿ ಎಂದು ಹೇಳಿದರು.
ಅಡಿಕೆ ಮರದ ಹಾಳೆಗಳಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ, ಅದನ್ನು ವಿದೇಶಗಳಿಗೆ ರಫ್ತು ಮಾಡುವ ಮಲೆನಾಡಿನ ಶಿವಮೊಗ್ಗದ ದಂಪತಿಗಳಾದ ಸುರೇಶ್ ಮತ್ತು ಮೈಥಿಲಿಯವರ ವಿಚಾರವನ್ನೂ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ಉಲ್ಲೇಖಿಸಿದರು.
ಪ್ರಪಂಚದ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಾವು ಜಾಗರೂಕರಾಗಿರಬೇಕು ಮತ್ತು ಮಾಸ್ಕ್ ಗಳನ್ನು ಧರಿಸಬೇಕು ಮತ್ತು ಕೈ ತೊಳೆಯಬೇಕು ಎಂದು ಪ್ರಧಾನಿ ಮೋದಿ ಹೇಳಿದರು.