Advertisement
2 ವಿಮಾ ಯೋಜನೆ ವಿಸ್ತರಣೆಕೃಷಿ ಬೆಳೆಗಳಿಗೆ ವಿಮೆ ಒದಗಿಸುವ 2 ಯೋಜನೆ ಗಳನ್ನು 1 ವರ್ಷ ಕಾಲ ವಿಸ್ತರಿಸಲಾಗಿದೆ. ವಿಶ್ವದಲ್ಲೇ ಅತಿದೊಡ್ಡ ವಿಮಾ ಯೋಜನೆ ಎನಿಸಿಕೊಂಡಿರುವ ಪ್ರಧಾನ ಮಂತ್ರಿ ಫಸಲ್ ವಿಮೆಯಿಂದಾಗಿ ರೈತರ ತಮ್ಮ ಬೆಳೆ ಹಾನಿಯಿಂದ ನಷ್ಟಕ್ಕೊಳಲಾಗುವುದನ್ನು ತಪ್ಪಿಸಿಕೊಳ್ಳಬಹುದಾಗಿದೆ. ಇದಲ್ಲದೇ ಮಳೆ, ಪ್ರವಾಹ, ಬರದಂತಹ ಸಮಸ್ಯೆಗಳಿಂದ ಉಂಟಾ ಗುವ ನಷ್ಟ ತುಂಬಿಕೊಡುವ ಹವಾಮಾನ ಆಧರಿತ ಬೆಳೆ ವಿಮಾ ಯೋಜನೆಯನ್ನೂ ವಿಸ್ತರಿಸಲಾಗಿದೆ.
ಕೃಷಿಯಲ್ಲಿ ತಂತ್ರಜ್ಞಾನದ ಅಭಿವೃದ್ಧಿಗಾಗಿ ಹಾಗೂ ಸಂಶೋಧನೆಯನ್ನು ಹೆಚ್ಚಿಸುವುದಕ್ಕಾಗಿ 824.77 ಕೋಟಿ ರೂ. ನಿಧಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರಡಿಯಲ್ಲಿ ತಂತ್ರ ಜ್ಞಾನವನ್ನು ಬಳಕೆ ಮಾಡಿ ಕೊಂಡು ಇಳು ವರಿಯನ್ನು ಲೆಕ್ಕಾಚಾರ ಮಾಡುವ ಯೆಸ್ ಟೆಕ್’ ಮತ್ತು ಹವಾಮಾನದ ಮಾಹಿತಿಯನ್ನು ಕಲೆಹಾಕುವ ವಿಂಡ್ಸ್’ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಕರ್ನಾಟಕ, ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಈ ಯೋಜನೆ ಗಳನ್ನು ಈಗಾಗಲೇ ಅನುಷ್ಠಾನ ಮಾಡಲಾಗುತ್ತಿದೆ.
Related Articles
ರಸಗೊಬ್ಬರದ ಮಾರುಕಟ್ಟೆ ದರವನ್ನು ನಿಯಂತ್ರಿಸುವುದಕ್ಕಾಗಿ ಮತ್ತು ರೈತರಿಗೆ ಅನುಕೂಲ ಒದಗಿಸಿಕೊಡುವುದಕ್ಕಾಗಿ ಡೈ-ಅಮೋನಿಯಂ ಫಾಸ್ಪೇಟ್ ರಸಗೊ ಬ್ಬರಕ್ಕೆ ನೀಡುತ್ತಿರುವ ಸಬ್ಸಿಡಿಯನ್ನು 1 ವರ್ಷಗಳ ಕಾಲ ವಿಸ್ತರಿಸಲು ಕೇಂದ್ರ ಸರಕಾರ 3,850 ಕೋಟಿ ರೂ. ನೀಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 50 ಕೇಜಿ ಡಿಎಪಿ ಗೊಬ್ಬರದ ಬೆಲೆ 1,350 ರೂ. ಇದೆ. ಕಳೆದ ವರ್ಷವೂ ರಸಗೊಬ್ಬರ ಸಬ್ಸಿಡಿಗಾಗಿ ಕೇಂದ್ರ ಸರಕಾರ 3,500 ಕೋಟಿ ರೂ. ಘೋಷಣೆ ಮಾಡಿತ್ತು.
Advertisement
ಏನೇನು ನಿರ್ಧಾರಗಳು?1.ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ: ಬೆಳೆಹಾನಿಯಿಂದ ಉಂಟಾಗುವ ನಷ್ಟವನ್ನು ತಪ್ಪಿಸಲು ಆರಂಭಿಸಿರುವ ಯೋಜನೆ ಇದಾಗಿದ್ದು, ರೈತರ ಆದಾಯವನ್ನು ಸ್ಥಿರೀಕರಿಸುವ ಮೂಲಕ ಕೃಷಿಯನ್ನು ಉತ್ತೇಜಿಸುತ್ತದೆ.
2.ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ: ಮಳೆ, ಪ್ರವಾಹ, ಬರದಂತಹ ಸಮಸ್ಯೆಗಳಿಂದ ಉಂಟಾಗುವ ನಷ್ಟ ತುಂಬಿಕೊಡುವ ಯೋಜನೆ ಇದು. ಆಹಾರ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ವಾಣಿಜ್ಯ ಬೆಳೆಗಳಿಗೂ ವಿಮೆ ತುಂಬಿಕೊಡುತ್ತದೆ.
3.ತಂತ್ರಜ್ಞಾನ ಅಭಿವೃದ್ಧಿ ಯೋಜನೆ: ಕೃಷಿಯಲ್ಲಿ ತಂತ್ರಜ್ಞಾನದ ಅಭಿವೃದ್ಧಿಗಾಗಿ ಹಾಗೂ ಸಂಶೋಧನೆಯನ್ನು ಹೆಚ್ಚಿಸುವುದಕ್ಕಾಗಿ ಫಿಯಟ್ ಯೋಜನೆ ಘೋಷಿಸಲಾಗಿದೆ. ಇದರಡಿ ತಂತ್ರಜ್ಞಾನ ಬಳಸಿಕೊಂಡು ಇಳುವರಿಯನ್ನು ಲೆಕ್ಕಾಚಾರ ಮಾಡುವ “ಎಸ್ ಟೆಕ್’ ಮತ್ತು ಹವಾಮಾನದ ಮಾಹಿತಿಯನ್ನು ಕಲೆಹಾಕುವ “ವಿಂಡ್ಸ್’ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ 2 ಯೋಜನೆಗಳನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.