ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಮಾರ್ಚ್ 09) ಅರುಣಾಚಲಕ್ಕೆ ಒಂದು ದಿನದ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ವಿಶ್ವದ ಅತೀ ಎತ್ತದಲ್ಲಿ ನಿರ್ಮಿಸಲಾಗಿರುವ “ಸೆಲಾ ಪಾಸ್ ದ್ವಿಪಥ ಸುರಂಗ” ಮಾರ್ಗವನ್ನು ಅನಾವರಣಗೊಳಿಸಿದರು. ಅಲ್ಲದೇ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶ, ಮೇಘಾಲಯ, ನಾಗಾ ಲ್ಯಾಂಡ್, ಸಿಕ್ಕಿಂ, ತ್ರಿಪುರಾ ಅಭಿವೃದ್ಧಿಗಾಗಿ ಒಟ್ಟು 55,000 ಸಾವಿರ ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.
ಇದನ್ನೂ ಓದಿ:ಚಲನಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದ ದಾಂಡೇಲಿಯ ಏಕೈಕ ಚಿತ್ರಮಂದಿರ ಶ್ರೀಹರಿ ಟಾಕೀಸ್
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಸ್ಸಾಂಗೆ ಭೇಟಿ ನೀಡಿ, ಕಾಜಿರಂಗ ನ್ಯಾಷನಲ್ ಪಾರ್ಕ್ ನಲ್ಲಿ ಜಂಗಲ್ ಸಫಾರಿ ನಡೆಸಿದ್ದರು. ಮೊದಲಿಗೆ ಸೆಂಟ್ರಲ್ ಕೋಹೊರಾ ರಂಗೆ ಪಾರ್ಕ್ ನಲ್ಲಿ ಆನೆ ಸಫಾರಿ ಕೈಗೊಂಡಿದ್ದು, ಬಳಿಕ ಅರಣ್ಯಾಧಿಕಾರಿಗಳ ಜತೆ ಜೀಪ್ ಸಫಾರಿ ನಡೆಸಿರುವುದಾಗಿ ವರದಿ ವಿವರಿಸಿದೆ.
ಸೆಲಾ ಪಾಸ್ ದ್ವಿಪಥ ಸುರಂಗ ಮಾರ್ಗವು ಅರುಣಾಚಲ ಪ್ರದೇಶದ ಪಶ್ಚಿಮ ಕಮಿಂಗ್ ಮತ್ತು ತವಾಂಗ್ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಸೆಲಾ ಪಾಸ್ ವಾಸ್ತವ ಗಡಿ ನಿಯಂತ್ರಣ ರೇಖ್ ತಲುಪಲು ಇರುವ ಏಕೈಕ ಮಾರ್ಗವಾಗಿದೆ.
ಸೆಲಾ ಪಾಸ್ ನ ಎಂಜಿನಿಯರಿಂಗ್ ಕಾರ್ಯ ಅತ್ಯದ್ಭುತವಾಗಿದ್ದು, ಅರುಣಾಚಲಪ್ರದೇಶದ ಸೆಲಾ ಪಾಸ್ ಸುರಂಗವು ಸರ್ವ ಋತು ಹವಾಮಾನ ಸಂಪರ್ಕವನ್ನು ಒದಗಿಸಲಿದ್ದು, ಅಂದಾಜು 825 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸುರಂಗವು ದೇಶದ ಆಯಕಟ್ಟಿನ ಮಹತ್ವವನ್ನು ಹೊಂದಿದೆ. 2019ರಲ್ಲಿ ಪ್ರಧಾನಿ ಮೋದಿ ಅವರು ಸೆಲಾ ಪಾಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.