Advertisement

6000 ಸಾವಿರ ಕೋಟಿ ರೂ. ವೆಚ್ಚದ ಅಟಲ್ ಭೂ ಜಲ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

10:05 AM Dec 26, 2019 | Nagendra Trasi |

ನವದೆಹಲಿ: ಅಂತರ್ಜಲ ರಕ್ಷಿಸುವ  ಸುಮಾರು 6000 ಸಾವಿರ ಕೋಟಿ ರೂಪಾಯಿ ವೆಚ್ಚದ ರಾಷ್ಟ್ರೀಯ ಯೋಜನೆಯಾದ ಅಟಲ್ ಭೂ ಜಲ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು.

Advertisement

ಈಗಾಗಲೇ ಕೇಂದ್ರ ಸಂಪುಟ ಅಟಲ್ ಭೂ ಜಲ ಯೋಜನೆಗೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ಜನ್ಮ ದಿನಾಚರಣೆ ಅಂಗವಾಗಿ ಈ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.

2020ರಿಂದ 2025ರೊಳಗೆ ಈ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು. ಕರ್ನಾಟಕ, ಗುಜರಾತ್, ಹರ್ಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರಪ್ರದೇಶ ಸೇರಿದಂತೆ ಏಳು ರಾಜ್ಯಗಳ ಕೆಲವು ಆದ್ಯತೆಯ ಪ್ರದೇಶಗಳಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ ಎಂದು ಪ್ರಧಾನಿ ಹೇಳಿದರು.

ಅಂತರ್ಜಲ ರಕ್ಷಿಸುವ ಈ ಯೋಜನೆಯಿಂದ ಏಳು ರಾಜ್ಯಗಳ 78 ಜಿಲ್ಲೆಯ ಸುಮಾರು 8,350 ಗ್ರಾಮ ಪಂಚಾಯ್ತಿಗಳಿಗೆ ಲಾಭವಾಗುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next