Advertisement
ನೇಪಾಳ ಸರ್ಕಾರಿ ಸಂಸ್ಥೆಯ ಅಂಕಿಅಂಶದ ಪ್ರಕಾರ, ಚೀನಾ ಅಕ್ರಮವಾಗಿ ನೇಪಾಳದ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಿದೆ. ಈಗಾಗಲೇ ಏಳು ಜಿಲ್ಲೆಗಳ ಗಡಿಯನ್ನು ಆಕ್ರಮಿಸಿಕೊಂಡಿದೆ. ಅಲ್ಲದೇ ನಿಧಾನಕ್ಕೆ ಅತಿಕ್ರಮಣ ಮುಂದುವರಿಸಿದೆ ಎಂದು ತಿಳಿಸಿದೆ.
Related Articles
Advertisement
ನೇಪಾಳದ ಡೋಲಾಖ್, ಗೋರಖ್, ದಾರ್ಚೂಲಾ, ಹುಮ್ಲಾ, ಸಿಂಧುಪಾಲ್ ಚೌಕ್, ಸಂಖುವಾಸಭಾ ಮತ್ತು ರಾಸುವಾ ಜಿಲ್ಲೆಗಳು ಚೀನಾದ ಭೂ ಅತಿಕ್ರಮಣದ ಸಂಚಿಗೆ ಬಲಿಯಾಗಿರುವುದಾಗಿ ವರದಿ ಆರೋಪಿಸಿದೆ.
ಚೀನಾ ನೇಪಾಳದ ಡೋಲಾಖ್ ಪ್ರದೇಶದಲ್ಲಿ ಸುಮಾರು 1,500 ಮೀಟರ್ ನಷ್ಟು ದೂರ ಅಂತರಾಷ್ಟ್ರೀಯ ಗಡಿಯನ್ನು ವಿಸ್ತರಿಸಿದೆ. ಅದೇ ರೀತಿ ಡೋಲಾಖ್ ನ ಕೋರ್ಲಾಂಗ್ ಪ್ರದೇಶದಲ್ಲಿನ 57 ನಂಬರಿನ ಗಡಿ ಕಂಬವನ್ನು ಮುಂದಿಕ್ಕೆ ಹಾಕಿ ತನ್ನ ಜಾಗವನ್ನು ವಿಸ್ತರಿಸಿಕೊಂಡಿದೆ. ಅಲ್ಲದೇ ಮಾನವಹಕ್ಕು ಆಯೋಗ ವರದಿಯಂತೆ, ದಾರ್ಚುಲಾದ ಜಿಯೂಜಿಯು ಗ್ರಾಮವನ್ನು ಚೀನಾ ಅತಿಕ್ರಮಿಸಿದೆ. ನೇಪಾಳದ ಪ್ರದೇದಲ್ಲಿದ್ದ ಹಲವಾರು ಮನೆಗಳು ಇದೀಗ ಚೀನಾ ಸುಪರ್ದಿಗೆ ಸೇರಿದೆ ಎಂದು ಹೇಳಿದೆ.
ಕಳೆದ ಕೆಲವು ವರ್ಷಗಳಿಂದ ನೇಪಾಳದ ಕಮ್ಯೂನಿಷ್ಟ್ ಪಕ್ಷ ಚೀನಾ ಕಮ್ಯೂನಿಷ್ಟ್ ಪಕ್ಷ(ಸಿಸಿಪಿ)ದ ಕೈಗೊಂಬೆಯಂತೆ ಕುಣಿಯುತ್ತಿದೆ. ಇದರಿಂದಾಗಿ ನೇಪಾಳದ ಬಹುತೇಕ ನಿರ್ಧಾರಗಳಲ್ಲಿ ಚೀನಾ ಹಸ್ತಕ್ಷೇಪ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.
ಕೆಲವು ವಿಶ್ಲೇಷಕರ ಪ್ರಕಾರ, ನೇಪಾಳ ಪ್ರಧಾನಿ ಕೆಪಿ ಒಲಿ ಹಾಗೂ ಎನ್ ಸಿಪಿಯ ಪ್ರಚಂಡ ನಡುವಿನ ವೈಷಮ್ಯವನ್ನು ಬಗೆಹರಿಸುವ ಮಧ್ಯವರ್ತಿಯಂತೆ ನೇಪಾಳದಲ್ಲಿರು ಚೀನಾ ರಾಯಭಾರಿ ಕಾರ್ಯನಿರ್ವಹಿಸುತ್ತಿರುವ ಬೆಳವಣಿಗೆಯನ್ನು ಇಡೀ ಜಗತ್ತು ಗಮನಿಸುತ್ತಿದೆ. ಚೀನಾ-ನೇಪಾಳದ ಈ ಗೆಳೆತನ ಮತ್ತು ನೆರವು ನೀಡುತ್ತಿರುವ ಹಿಂದಿನ ಉದ್ದೇಶ ಚೀನಾದ ಭೂ ವಿಸ್ತರಣಾ ದಾಹದ ವಸಾಹತುಶಾಹಿಯ ಒಂದು ಭಾಗದ ಮುಂದುರಿಕೆಯಾಗಿದೆ ಎಂದು ವಿವರಿಸಿದ್ದಾರೆ.