Advertisement

ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ? ನೋಡುವುದು ಹೇಗೆ..?

11:43 AM Apr 02, 2021 | Team Udayavani |

ನವ ದೆಹಲಿ :  ಪ್ರತಿ ವರ್ಷ ಮೂರು ಕಂತುಗಳಲ್ಲಿ ದೇಶದ ರೈತರ ಬ್ಯಾಂಕ್ ಖಾತೆಗಳಿಗೆ 6000 ಸಾವಿರವನ್ನು ವರ್ಗಾಯಿಸುವ ಪ್ರಧಾನಿ ನರೇಂದ್ರ ಮೊದಿಯವರ ಜನ ಪರ ಯೋಜನೆಗಳಲ್ಲಿ ಒಂದಾದ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ 8 ನೇ ಕಂತು ಬಿಡುಗಡೆಯಾಗಿದೆ.

Advertisement

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಈ ವರ್ಷದ ಮೊದಲ ಕಂತು ಹಾಗೂ ಯೋಜನೆಯ ಎಂಟನೇ ಕಂತು ಬಿಡುಗಡೆಯಾಗಿದ್ದು, ಯೋಜನೆಯ ಅಡಿಯಲ್ಲಿ 11.66 ಕೋಟಿ ರೂ ನಷ್ಟು ಹಣ ರೈತರ ಖಾತೆಗಳನ್ನು ತುಂಬಲಿದೆ.

ಓದಿ : ತೋತಾಪುರಿಯ ಕಲರ್‌ಫುಲ್ ಹಾಡು: ಹೆಜ್ಜೆ ಹಾಕಿದ ಜಗ್ಗೇಶ್‌-ಅದಿತಿ ಪ್ರಭುದೇವ

ಬಿಡುಗಡೆಯಾಗಿದೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 8 ನೇ ಕಂತು  :

ಎರಡು ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ ರೈತರ ಖಾತೆಗೆ  ಆರು ಸಾವಿರ ರೂಪಾಯಿಗಳನ್ನು ವರ್ಗಾಯಿಸುವ ಯೋಜನೆಯ ಮೊದಲ ಕಂತು ಪ್ರತಿ ವರ್ಷ ಏಪ್ರಿಲ್ 1 ರಿಂದ ಜುಲೈ 31 ರ ತನಕ ನೀಡುತ್ತದೆ.  ಎರಡನೇ ಕಂತನ್ನು ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ಮತ್ತು ಮೂರನೇ ಕಂತನ್ನು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ನೀಡಲಾಗುತ್ತದೆ.

Advertisement

ನೀವು ಈ ವರ್ಷದ ಮೊದಲ ಕಂತಿನಲ್ಲಿ 2000 ರೂಪಾಯಿಗಳು ನಿಮ್ಮ ಖಾತೆಯನ್ನು ತಲುಪಿದೆಯೇ ಎಂದು ಪರಿಶೀಲಿಸಬಹುದಾಗಿದೆ. ಸರ್ಕಾರ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಿಮ್ಮ ಹಣ ಶೀಘ್ರವೇ ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ.

ಓದಿ : ಶ್ರೇಯಸ್‌ ಪ್ರೇಮಪುರಾಣ: ವಿಷ್ಣುಪ್ರಿಯದಲ್ಲಿ 90ರ ಲವ್‌ ಸ್ಟೋರಿ

ನಿಮ್ಮ ಹೆಸರು ಸರ್ಕಾರ ಬಿಡುಗಡೆಗೊಳಿಸುವ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸುವುದು ಹೇಗೆ..?

*https://pmkisan.gov.in  ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.

*ವೆಬ್ ಸೈಟ್ ಫಾರ್ಮರ್ಸ್ ಕಾರ್ನರ್ ಆಯ್ಕೆಯನ್ನು ಕಾಣಿಸುತ್ತದೆ. ಫಾರ್ಮರ್ಸ್ ಕಾರ್ನರ್ ವಿಭಾಗದೊಳಗೆ, ಫಲಾನುಭವಿಗಳ ಪಟ್ಟಿಯ ಆಯ್ಕೆ ಇರುತ್ತದೆ. ಅದರ ಮೇಲೆ ಕ್ಲಿಕ್ ನ್ನು ಒತ್ತಿ.

*ಪಟ್ಟಿಯಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಮಾಹಿತಿಯನ್ನು ತಿಳಿಸಬೇಕಾಗುತ್ತದೆ.

* ’ಗೆಟ್ ರಿಪೋರ್ಟ್’ ಕ್ಲಿಕ್ ಮಾಡಿದಾಗ, ಫಲಾನುಭವಿಗಳ ಸಂಪೂರ್ಣ ಪಟ್ಟಿ ನಿಮಗೆ ಲಭ್ಯವಾಗುತ್ತದೆ.

ಓದಿ :  ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 81,466 ಕೋವಿಡ್ ಕೇಸ್ ಪತ್ತೆ, 6 ತಿಂಗಳಲ್ಲಿ ಗರಿಷ್ಠ

Advertisement

Udayavani is now on Telegram. Click here to join our channel and stay updated with the latest news.

Next