ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ನಿಧಿ) ಯ 8ನೇ ಕಂತಿನ ಹಣವನ್ನು ಶುಕ್ರವಾರ(ಮೇ 14) ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆಗೊಳಿಸಿದರು.
ಇದನ್ನೂ ಓದಿ:ಕೋವಿಡ್ ಸೋಂಕು ನಡುವೆ ಉತ್ತರಪ್ರದೇಶದಲ್ಲಿ 73 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ
ಪ್ರಧಾನಿ ಮೋದಿ ಅವರು ಈ ಯೋಜನೆಯಡಿ 20,000 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಈ ಯೋಜನೆಯಡಿ 9.5 ಕೋಟಿ ರೈತ ಫಲಾನುಭವಿಗಳಿದ್ದಾರೆ ಎಂದು ವರದಿ ವಿವರಿಸಿದೆ.
ಅಷ್ಟೇ ಅಲ್ಲ ಉತ್ತರಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮೇಘಾಲಯ, ಜಮ್ಮು ಮತ್ತು ಕಾಶ್ಮೀರ, ಅಂಡಮಾನ್, ನಿಕೋಬಾರ್ ರಾಜ್ಯಗಳ ಐವರು ರೈತರ ಜತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.
2019ರಲ್ಲಿ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯನ್ನು ಪ್ರಧಾನಿ ಮೋದಿ ಅವರು 2019ರಲ್ಲಿ ಬಿಡುಗಡೆಗಗೊಳಿಸಿದ್ದರು. ಈ ಯೋಜನೆ ಮೂಲಕ ದೇಶಾದ್ಯಂತ ಇರುವ ರೈತರಿಗೆ ಆದಾಯ ಬೆಂಬಲ ನೀಡುವುದಾಗಿದೆ ಎಂದು ತಿಳಿಸಿದೆ.