Advertisement
ಸರಣಿಯ ಈ ದ್ವಿತೀಯ ಪಂದ್ಯ ನ. 22ರಿಂದ ಐತಿಹಾಸಿಕ ಈಡನ್ ಗಾರ್ಡನ್’ನಲ್ಲಿ ಆರಂಭವಾಗಲಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಕ್ಯಾಬ್ ಆಹ್ವಾನಿಸಿದೆ. ಕ್ರಿಕೆಟ್ ಸಂಭ್ರಮ ಹೆಚ್ಚಿಸುವ ಉದ್ದೇಶದಿಂದ ಕ್ಯಾಬ್ ಇಂಥದೊಂದು ನಿರ್ಧಾರಕ್ಕೆ ಬಂದಿದೆ. ಹಾಗೆಯೇ ಬಂಗಾಲದವರೇ ಆದ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗುವುದರಿಂದ ಈ ಸಂಭ್ರಮ ಹೆಚ್ಚಿಸುವುದೂ ರಾಜ್ಯಕ್ರಿಕೆಟ್ ಮಂಡಳಿಯ ಉದ್ದೇಶವಾಗಿದೆ.
ಭಾರತದಲ್ಲಿ ನಡೆದ ಕ್ರಿಕೆಟ್ ಪಂದ್ಯವನ್ನು ಎರಡೂ ದೇಶಗಳ ಪ್ರಧಾನಿಗಳು ವೀಕ್ಷಿಸಿದ ಕೊನೆಯ ನಿದರ್ಶನ 2011ರ ವಿಶ್ವಕಪ್‌ನಲ್ಲಿ ಕಾಣಸಿಗುತ್ತದೆ. ಅಂದಿನ ಭಾರತ-ಪಾಕಿಸ್ತಾನ ನಡುವಿನ ಹೈ ವೋಲ್ಟೆàಜ್ ಸೆಮಿಫೈನಲ್ ಮುಖಾಮುಖೀ ವೇಳೆ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕ್ ಪ್ರಧಾನಿ ಯೂಸುಫ್ ರಝ ಗಿಲಾನಿ ಮೊಹಾಲಿ ಸ್ಟೇಡಿಯಂಗೆ ಆಗಮಿಸಿದ್ದರು.