Advertisement

ವಿಪಕ್ಷವನ್ನು ಹಣಿಯಲು PM ಸರಕಾರಿ ಕಾರ್ಯಕ್ರಮ: ರಾಷ್ಟ್ರಪತಿಗೆ ದಿನೇಶ್‌ ಗುಂಡೂರಾವ್‌ ಪತ್ರ

08:17 PM Jul 02, 2023 | Team Udayavani |

ಬೆಂಗಳೂರು: ಪ್ರಧಾನ ಮಂತ್ರಿಗಳು ವಿಪಕ್ಷಗಳ ವಿರುದ್ಧ ಸುಳ್ಳು ಪ್ರಚಾರ ಮಾಡಲು ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪತ್ರ ಬರೆದಿದ್ದಾರೆ.

Advertisement

ಶನಿವಾರ ವಚುರ್ವಲ್‌ನಲ್ಲಿ ನಡೆದ ಸಿಕಲ್‌ಸೆಲ್‌ ರಕ್ತಹೀನ ನಿವಾರಣೆ ಮಿಷನ್‌ಗೆ ಚಾಲನೆ ನೀಡುವ ಸರಕಾರಿ ಅಧಿಕೃತ ಕಾರ್ಯಕ್ರಮವನ್ನು ಚುನಾವಣ ಮೂಡ್‌ನ‌ಲ್ಲಿರುವ ಪ್ರಧಾನಿ ಮೋದಿ ಅವರು ವಿಪಕ್ಷಗಳನ್ನು ಹಣಿಯಲು ಬಳುಸತ್ತಿರುವುದು ಎಷ್ಟು ಸರಿ? ರಾಜ್ಯದ ಆರೋಗ್ಯ ಸಚಿವನಾಗಿ ವಿಕಾಸ ಸೌಧದಿಂದ ವರ್ಚುವಲ್‌ ಸಭೆಯಲ್ಲಿ ಭಾಗವಹಿಸಿದ್ದೆ. ಆದರೆ ಮೋದಿಯವರು ಯಾರೊಂದಿಗೂ ಚರ್ಚಿಸಿದೆ ವಿಪಕ್ಷಗಳನ್ನು ದೂಷಿಸುವ ಭಾಷಣ ಮಾಡಿದರು ಎಂದು ಆರೋಪಿಸಿದರು.

ಸಿಕಲ್‌ ಸೆಲ್‌ ರಕ್ತಹೀನ ಕಾಯಿಲೆ ಬಗ್ಗೆ ದೇಶದಲ್ಲಿ ಮೊದಲಿಗೆ ಕರ್ನಾಟಕದಲ್ಲಿ ಈ ಬಗ್ಗೆ ಜಾಗೃತಿ ಪ್ರಾರಂಭಿಸಲಾಗಿದೆ. 2016ರಲ್ಲಿ ರಾಜ್ಯದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಮೈಸೂರು ಭಾಗದ ಬುಡಕಟ್ಟು ಜನರ ತಪಾಸಣೆ ನಡೆಸಿ ಪಾಸಿಟಿವ್‌ ಬಂದವರಿಗೆ ಉಚಿತ ಆರೋಗ್ಯ ಚಿಕಿತ್ಸೆ ನೀಡುತ್ತಿದೆ. ಈ ಕಾಯಿಲೆ ತಡೆಗಟ್ಟುತ್ತಿರುವ ಕ್ರಮಗಳ ಬಗ್ಗೆ ಪ್ರಧಾನಿ ಮೋದಿಯವರು ರಾಜ್ಯ ಸರಕಾರದ ಅಭಿಪ್ರಾಯ ಕೇಳುತ್ತಾರೆ ಎಂಬ ನಿರೀಕ್ಷೆಯಲ್ಲಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆದರೆ ಪ್ರಧಾನಿ ತಮ್ಮ ಪಕ್ಷದ ಚುನಾವಣ ಭಾಷಣಕ್ಕೆ ನಮ್ಮ ಸಮಯವನ್ನು ವ್ಯರ್ಥಮಾಡಿದರು. ಅವರು ಎಲ್ಲರಿಗೂ ನಿರಾಶೆ ಉಂಟುಮಾಡಿದರು ಎಂದು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿಯವರು ವಿಪಕ್ಷಗಳ ಬಗ್ಗೆ ತಮಗಿರುವ ಪೂರ್ವಾಗ್ರಹಗಳನ ಮುಂದಿಡಲು ಸರಕಾರದ ಅಧಿಕೃತ ಕಾರ್ಯಚಟುವಟಿಕೆಯನ್ನು ಆರಿಸಿಕೊಂಡಿರುವುದು ಆಕ್ಷೇಪಾರ್ಹವಾಗಿದೆ. ಜನಸಾಮಾನ್ಯರಿಗೆ ಕಾಂಗ್ರೆಸ್‌ ನೀಡುತ್ತಿರುವ ಗ್ಯಾರಂಟಿಗಳನ್ನು ಮೋಸ ಎಂದು ಕರೆದಿದ್ದಾರೆ. ಆದರೆ ನಮ್ಮ ಗ್ಯಾರಂಟಿಯಿಂದ ಜನಸಾಮಾನ್ಯರಿಗೆ ಆರ್ಥಿಕ ಸಹಾಯವಾಗಿದೆ ಎಂದರು.

ಆರೋಗ್ಯ ಸೇವೆಗಳಲ್ಲಿ ಕರ್ನಾಟಕದ ಸಾಧನೆ ಮತ್ತು ಸಿಕಲ್‌ ಸೆಲ್‌ ಕಾಯಿಲೆ ವಿರುದ್ಧ ಹೋರಾಡಲು ರಾಜ್ಯದ ಐತಿಹಾಸಿಕ ಪ್ರಯತ್ನಗಳನ್ನ ಪ್ರಧಾನಿ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ. 2024ರ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ರಾಜಕೀಯ ಭಾಷಣಗಳಿಗೆ ಸರಕಾರದ ಆಡಳಿತಯಂತ್ರದ ಬಳಕೆಗೆ ಅವಕಾಶ ನೀಡಬಾರದು ಎಂದು ಸಚಿವರು ರಾಷ್ಟ್ರಪತಿ ಮುರ್ಮು ಅವರಿಗೆ ಪತ್ರದ ಮುಖೇನ ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.