ನವದೆಹಲಿ: 2021ರಲ್ಲಿ ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮುಖ್ಯ ಅಥಿಯಾಗಿ ಭಾಗವಹಿಸಲಿದ್ದಾರೆ ಎಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೋಮಿನಿಕ್ ರಾಬ್ ಮಂಗಳವಾರ(ಡಿಸೆಂಬರ್ 15, 2020) ತಿಳಿಸಿದ್ದಾರೆ.
ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಚಿವ ಎಸ್. ಜೈಶಂಕರ್ ಜತೆಗಿನ ಮಾತುಕತೆ ವೇಳೆ ಯುಕೆ ವಿದೇಶಾಂಗ ಕಾರ್ಯದರ್ಶಿ ಡೋಮಿನಿಕ್ ರಾಬ್ ಖಚಿತಪಡಿಸಿದ್ದಾರೆ.
ಮುಂದಿನ ಹೊಸ ವರ್ಷ ನಡೆಯಲಿರುವ ರಾಜ್ಯೋತ್ಸವಕ್ಕೆ ಮುಖ್ಯ ಅಥಿಯಾಗಿ ಭಾಗವಹಿಸಬೇಕು ಎಂಬ ಭಾರತದ ಆಹ್ವಾನವನ್ನು ಬೋರಿಸ್ ಜಾನ್ಸ್ ನ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಆಸೀಸ್ ಗೆ ಗಾಯದ ಮೇಲೆ ಬರೆ: ಪಿಂಕ್ ಬಾಲ್ ಟೆಸ್ಟ್ ಗೂ ಮುನ್ನ ಪ್ರಮುಖ ಆಟಗಾರನಿಗೆ ಗಾಯ
ಮುಂದಿನ ವರ್ಷ ಬ್ರಿಟನ್ ಆಯೋಜಿಸಿರುವ ಜಿ7ಶೃಂಗದ ಜತೆ ಕೈಜೋಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೋರಿಸ್ ಜಾನ್ಸನ್ ಆಹ್ವಾನಿಸಿದ್ದಾರೆ. ಅಲ್ಲದೇ ಜನವರಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಬೇಕೆಂಬ ಆಹ್ವಾನವನ್ನು ಬೋರಿಸ್ ಸ್ವೀಕರಿಸಿದ್ದಾರೆ ಎಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೋಮಿನಿಕ್ ರಾಬ್ ತಿಳಿಸಿದ್ದಾರೆ.
ಉಭಯ ದೇಶಗಳ ನಡುವೆ ಅಗತ್ಯವಿರುವ ದ್ವಿಪಕ್ಷೀಯ ಸಂಬಂಧದ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಬ್ ಹಾಗೂ ಜೈ ಶಂಕರ್ ಜಂಟಿಯಾಗಿ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.