Advertisement
ಈ ಮೂಲಕ ಚುನಾವಣ ಪ್ರಚಾರಕ್ಕೂ ಚಾಲನೆ ನೀಡಿರುವ ಅವರು, “ದೇಶದ ನಾನಾ ಭಾಗ ಗಳನ್ನು ಸುಲಲಿತವಾಗಿ ಸಂಪರ್ಕಿಸುವಂಥ ಮಹತ್ವದ ರಸ್ತೆ ಸಾರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ನಮ್ಮ ಸರಕಾರ ಬದ್ಧವಾಗಿದೆ. ಇದೊಂದು ಮಹಾ
Related Articles
Advertisement
ವನ್ಯಜೀವಿಗಳಿಗೆ ರಕ್ಷಣೆ, ಪ್ರವಾಸಿಗರಿಗೆ ಆಕರ್ಷಣೆ!:
ಉತ್ತರಾಖಂಡದಲ್ಲಿ ಪ್ರಧಾನಿ ಮೋದಿಯವರು ಶನಿವಾರ ಚಾಲನೆ ನೀಡಿದ 18,000 ಕೋಟಿ ರೂ. ಮೊತ್ತದ ಕಾಮಗಾರಿಗಳಲ್ಲಿ ದಿಲ್ಲಿ-ಡೆಹ್ರಾಡೂನ್ ಮಧ್ಯೆ ಎಲಿವೇಟೆಡ್ ವನ್ಯಜೀವಿ ಕಾರಿಡಾರ್ ಕೂಡ ಒಂದು. ಇದು ದೇಶದ ಮೊದಲ ವನ್ಯಜೀವಿ ಕಾರಿಡಾರ್ ಎಂಬ ಕೀರ್ತಿ ಪಡೆದಿದೆ. ಇದು ನಿರ್ಮಾಣವಾದ ಅನಂತರ ಇದರ ಮೂಲಕ ಡೆಹ್ರಾಡೂನ್ ಮತ್ತು ಮಸ್ಸೂರಿಗೆ ತೆರಳುವ ಪ್ರವಾಸಿಗರಿಗೆ ಪ್ರಕೃತಿಯ ಅದಮ್ಯ ಸೌಂದರ್ಯವನ್ನು ಸವಿಯುವ ಸದವಕಾಶ ದೊರೆಯಲಿದೆ. 16 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್‌ನಲ್ಲಿ ಥ್ರಿಲ್ಲಿಂಗ್ ಅನುಭವ ಸಿಗಲಿದೆ. ಅಷ್ಟೇ ಅಲ್ಲ, ವೇಗವಾಗಿ ಸಾಗುವ ವಾಹನಗಳಡಿ ಸಿಲುಕಿ ವನ್ಯಜೀವಿಗಳು ಸಾವಿಗೀಡಾಗುವಂಥ ದುರ್ಘಟನೆಗಳೂ ತಪ್ಪಲಿವೆ.
ಹೇಗಿರಲಿದೆ ಈ ಕಾರಿಡಾರ್? :
ದಿಲ್ಲಿ-ಸಹರಾನ್ಪುರ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್‌ನ ಪ್ರಮುಖ ಆಕರ್ಷಣೆಗಳಲ್ಲಿ ಈ ವನ್ಯಜೀವಿ ಕಾರಿಡಾರ್ ಕೂಡ ಒಂದು.. 16 ಕಿ.ಮೀ.ನ ಈ ಕಾರಿಡಾರ್ ಅನ್ನು ಎರಡು ಸೆಕ್ಷನ್‌ನಲ್ಲಿ ನಿರ್ಮಿಸಲಾಗುತ್ತದೆ. ಈ ಕಾರಿಡಾರ್‌ನಿಂದಾಗಿ ದಿಲ್ಲಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣ ಅವಧಿಯು 150 ನಿಮಿಷಗಳಷ್ಟು ಕಡಿತವಾಗಲಿದೆ. ಶಿವಾಲಿಕ್ ಅರಣ್ಯಪ್ರದೇಶದ ಮಧ್ಯೆ ಈ ಕಾರಿಡಾರ್ ಹಾದು ಹೋಗಲಿದ್ದು, ಸದ್ಯ ಇರುವ ದ್ವಿಪಥ ಹೆದ್ದಾರಿಯನ್ನು ಪ್ರಾಣಿಗಳ ಮುಕ್ತ ಸಂಚಾರಕ್ಕೆಂದು ಬಿಟ್ಟುಕೊಡಲು ನಿರ್ಧರಿಸಲಾಗಿದೆ.
ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು :
ಸದ್ಯದಲ್ಲೇ ಚುನಾವಣೆ ಎದುರಿಸಲಿರುವ ಉತ್ತರಾಖಂಡದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಬರೋಬ್ಬರಿ 18 ಸಾವಿರ ಕೋಟಿ ರೂ.ಗಳ ಯೋಜನೆಗಳನ್ನು ಘೋಷಿಸಿ ದ್ದಾರೆ. ದಿಲ್ಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ, ಬದ್ರಿನಾಥ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಸೇರಿದಂತೆ 15,728 ಕೋಟಿ ರೂ.ಗಳ 11 ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದು, 2,573 ಕೋಟಿ ರೂ. ಮೊತ್ತದ 7 ಯೋಜನೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ.
ಅನುಕೂಲತೆಯೇನು? :
- ವನ್ಯಜೀವಿ ಕಾರಿಡಾರ್ ಈ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿಗೆ ನೆರವಾಗಲಿದೆ
- ಹೆದ್ದಾರಿಯಲ್ಲಿ ಹೋಗುವ ವಾಹನಗಳಡಿ ಸಿಲುಕಿ ವನ್ಯಮೃಗಗಳು ಸಾವನ್ನಪ್ಪುವುದು ತಪ್ಪಲಿದೆ
- ದಿಲ್ಲಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣ ಅವಧಿ ಕಡಿತಗೊಳ್ಳಲಿದೆ.