Advertisement

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

01:39 AM Dec 22, 2024 | Team Udayavani |

ಕುವೈತ್: ಪ್ರಧಾನಿ ನರೇಂದ್ರ ಮೋದಿ ಅವರು ಕುವೈಟ್ ಪ್ರವಾಸದಲ್ಲಿದ್ದು ಶನಿವಾರ(ಡಿ21) ‘ಹಲಾ ಮೋದಿ’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ”ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಭಾರತದ ಜನರ ವೈವಿಧ್ಯತೆಯನ್ನು ನೋಡಲು ನನಗೆ ಸಂತೋಷವಾಗಿದೆ ಮತ್ತು ಇದು ಮಿನಿ-ಹಿಂದೂಸ್ಥಾನ ಆಗಿ ನನಗೆ ಗೋಚರಿಸುತ್ತಿದೆ” ಎಂದು ಸಂತಸ ಹೊರ ಹಾಕಿದರು.

Advertisement

ಕುವೈಟ್ ನಗರದ ಶೇಖ್ ಸಾದ್ ಅಲ್ ಅಬ್ದುಲ್ಲಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. “ಕೇವಲ 2-2.5 ಗಂಟೆಗಳ ಹಿಂದೆ, ನಾನು ಕುವೈಟ್‌ಗೆ ಬಂದಿಳಿದೆ. ಇಲ್ಲಿಗೆ ಕಾಲಿಟ್ಟಾಗಿನಿಂದ, ನಾನು ಅಸಾಧಾರಣವಾದ ಭಾವನೆ ಮತ್ತು ಆತ್ಮೀಯತೆಯನ್ನು ಅನುಭವಿಸಿದೆ. ನೀವೆಲ್ಲರೂ ಭಾರತದ ವಿವಿಧ ರಾಜ್ಯಗಳಿಂದ ಬಂದಿದ್ದೀರಿ, ಆದರೆ ಇಲ್ಲಿ ನಿಮ್ಮನ್ನು ನೋಡುವುದು ‘ಮಿನಿ ಹಿಂದೂಸ್ಥಾನ’ ನನ್ನ ಮುಂದೆ ಒಟ್ಟುಗೂಡಿದಂತೆ ಭಾಸವಾಗುತ್ತದೆ” ಎಂದರು.

“ಕುವೈಟ್ ವ್ಯಾಪಾರಿಗಳು ಗುಜರಾತಿ ಭಾಷೆಯನ್ನು ಕಲಿತು, ಪುಸ್ತಕಗಳನ್ನು ಬರೆದು ನಮ್ಮ ಮಾರುಕಟ್ಟೆಯಲ್ಲಿ ತಮ್ಮ ವಿಶ್ವಪ್ರಸಿದ್ಧ ಮುತ್ತುಗಳನ್ನು ವ್ಯಾಪಾರ ಮಾಡುತ್ತಿದ್ದುದನ್ನು ಗುಜರಾತಿನಲ್ಲಿರುವ ನಮ್ಮ ಹಿರಿಯರು ಇನ್ನೂ ನೆನಪಿಸಿಕೊಳ್ಳುತ್ತಾರೆ. ನಾವು ಕುದುರೆಗಳನ್ನು ಸರಬರಾಜು ಮಾಡಿದ್ದೇವೆ ಮತ್ತು ಇತರ ಅನೇಕ ವಸ್ತುಗಳನ್ನು ತೆಗೆದುಕೊಂಡಿದ್ದೇವೆ. ಭಾರತ ಮತ್ತು ಕುವೈಟ್ ನಡುವೆ ದೀರ್ಘಕಾಲದ ಸಂಬಂಧವಿದೆ” ಎಂದರು.

ಇಂದು, ವೈಯಕ್ತಿಕವಾಗಿ, ಈ ಕ್ಷಣ ನನಗೆ ತುಂಬಾ ವಿಶೇಷವಾಗಿದೆ. ನೀವೆಲ್ಲರೂ ಭಾರತಕ್ಕೆ ಬರಲು ನಾಲ್ಕು ಗಂಟೆಗಳು ಬೇಕಾಗುತ್ತದೆ, ಆದರೆ ಪ್ರಧಾನಿಗೆ ನಾಲ್ಕು ದಶಕಗಳು ಬೇಕಾಯಿತು,” ಎಂದು ಹಾಸ್ಯ ಚಟಾಕಿ ಹಾರಿಸಿದರು. ಮೋದಿ ಅವರ ಐತಿಹಾಸಿಕ ಭೇಟಿಯು ಭಾರತದ ಪ್ರಧಾನಿಯೊಬ್ಬರು ಕುವೈಟ್  43 ವರ್ಷಗಳ ಬಳಿಕ ಭೇಟಿ ನೀಡಿದಂತಾಗಿದೆ.

Advertisement

ಕೋವಿಡ್-19 ವೇಳೆ ಕುವೈಟ್ ಭಾರತಕ್ಕೆ ನೀಡಿದ ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸಿ ” ಕೋವಿಡ್ -19 ಸಂಕಷ್ಟದ ವೇಳೆ ಕುವೈಟ್ ನಮಗೆ ದ್ರವ ಆಮ್ಲಜನಕ ಪೂರೈಕೆ ಮಾಡಿದೆ ಎಂಬುದು ನನಗೆ ನೆನಪಿದೆ.ಅದಕ್ಕಾಗಿ ನಾವು ತುಂಬಾ ಕೃತಜ್ಞರಾಗಿರುತ್ತೇವೆ” ಎಂದರು.

“ಭಾರತವು ವಿಶ್ವಕ್ಕೆ ಅಗತ್ಯವಿರುವ ನುರಿತ ಹಾಗೂ ಕೌಶಲಯುತ ಪ್ರತಿಭೆಗಳಿಂದ ಸಜ್ಜಿತವಾಗಿದ್ದು, ವಿಶ್ವದ ಕೌಶಲ ರಾಜ್ಯಧಾನಿಯಾಗುವ ಸಾಮರ್ಥ್ಯವೂ ಭಾರತಕ್ಕಿದೆ. ನಮ್ಮ ನವೋದ್ಯಮಗಳು, ಫಿನ್‌ಟೆಕ್‌, ಸ್ಮಾರ್ಟ್‌ ಟೆಕ್ನಾಲಜಿ ಹಾಗೂ ಮಾನವ ಸಂಪನ್ಮೂಲವು “ಹೊಸ ಕುವೈಟ್‌’ ನಿರ್ಮಾಣಕ್ಕೆ ಸಹಕಾರಿಯಾಗಲಿದೆ’ಎಂದರು.

“ವ್ಯಾಪಾರ, ನಾವೀ­ನ್ಯತೆ ಮೂಲಕ ಹೊಸ ಕುವೈಟ್‌ ನಿರ್ಮಾಣಕ್ಕೆ ಇಲ್ಲಿನ ಜನರು ಪಣತೊಟ್ಟಿದ್ದಾರೆ. ಅದೇ ರೀತಿ 2047ರ ವೇಳೆಗೆ ನಾವೀನ್ಯತೆ ಮತ್ತು ಆರ್ಥಿಕತೆ ಬಲಪಡಿಸುವ ಮೂಲಕ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು ನಾವು ಪಣ ತೊಟ್ಟಿದ್ದೇವೆ. ಶೀಘ್ರವೇ ಕುವೈಟ್‌ ಸಮೃ­ದ್ಧಿಯ ಪಾಲುದಾರನೂ ಆಗಲಿದೆ’ ಎಂದರು.

ಕುವೈಟ್ ನ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಿ ಎಮಿರ್ ಅವರನ್ನು ಭೇಟಿಯಾಗಲಿದ್ದಾರೆ. ಗಲ್ಫ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿಯೂ ಭಾಗವಹಿಸಲಿದ್ದಾರೆ.

ರಾಮಾಯಣ ಭಾಷಾಂತರ ಮಾಡಿದವರ ಜತೆ ಮಾತು
ಭಾರತದ ಪೌರಾಣಿಕ ಮಹಾಕಾವ್ಯಗಳಾದ ರಾಮಾಯಣ ಹಾಗೂ ಮಹಾಭಾರತವನ್ನು ಕುವೈಟ್‌ ಭಾಷೆಗೆ ಭಾಷಾಂತರಿಸಿದ ಅಬ್ದುಲ್ಲಾ ಅಲ್‌ ಬರೋನ್‌ ಹಾಗೂ ಅವುಗಳನ್ನು ಪ್ರಕಟಿಸಿದ್ದ ಅಬ್ದುಲ್‌ ಲತೀಫ್ ಅಲ್‌ ನಸೀಫ್ ಅವರನ್ನು ಮೋದಿ ಭೇಟಿಯಾಗಿದ್ದಾರೆ.

ಕಾರ್ಮಿಕ ಶಿಬಿರಕ್ಕೆ ಭೇಟಿ: ಭಾರತೀಯ ಮೂಲದ ವಲಸೆ ಕಾರ್ಮಿಕರು ವಾಸವಿರುವ ಗಲ್ಫ್ ಸ್ಪಿಕ್‌ ಲೇಬರ್‌ ಕ್ಯಾಂಪ್‌ಗ್ೂ ಪ್ರಧಾನಿ ಭೇಟಿ ನೀಡಿ, ಅವರೊಂದಿಗೆ ಸಂವಾದ ನಡೆಸಿದ್ದಾರೆ.

101 ವರ್ಷದ ಮಾಜಿ ಐಎಫ್‌ಎಸ್ ಅಧಿಕಾರಿ ಭೇಟಿ
ಕುವೈಟ್ ನಲ್ಲಿ 101 ವರ್ಷದ ಮಾಜಿ ಐಎಫ್‌ಎಸ್ ಅಧಿಕಾರಿಯನ್ನು ಅವರ ಮೊಮ್ಮಗಳ ಕೋರಿಕೆಯ ಬಳಿಕ ಪ್ರಧಾನಿ ಮೋದಿ ಭೇಟಿ ಮಾಡಿದರು.

101 ವರ್ಷದ ಮಂಗಲ್ ಸೈನ್ ಹಂಡಾ, ಮಾಜಿ ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿ. ಹಂಡಾ ಅವರ ಮೊಮ್ಮಗಳು ಸಾಮಾಜಿಕ ಮಾಧ್ಯಮದಲ್ಲಿ ಮನವಿಯ ಮಡಿದ ನಂತರ ಸಂವಾದ ಸಾಧ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next