ಹೈದರಾಬಾದ್: ಉದ್ಯಮಿಗಳಾದ ಅಂಬಾನಿ, ಅದಾನಿ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಿದ್ದ ರಾಹುಲ್ ಗಾಂಧಿ ಇತ್ತೀಚೆಗೆ ಮೌನವಾಗಿರುವುದು ಯಾಕೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದು, ನಿಮಗೆ ಅಂಬಾನಿ, ಅದಾನಿಯಿಂದ ಎಷ್ಟು ಹಣ ಸಂದಾಯವಾಗಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:K. Vasantha Bangera: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅಸ್ತಂಗತ
ಬುಧವಾರ ತೆಲಂಗಾಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೆಲವು ವರ್ಷಗಳ ಕಾಲ ಕಾಂಗ್ರೆಸ್ ನ ಶೆಹಝಾದಾ 5 ಉದ್ಯಮಿಗಳ ಬಗ್ಗೆ ಮಾತನಾಡುತ್ತಿದ್ದರು. ಆದರೆ ನಂತರ ಅಂಬಾನಿ, ಅದಾನಿ ಬಗ್ಗೆ ಮಾತ್ರ ಮಾತನಾಡುತ್ತಿದ್ದು, ಇದೀಗ ಮೌನವಾಗಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ನಂತರ ರಾಹುಲ್ ಮತ್ತು ಕಾಂಗ್ರೆಸ್ ಮುಖಂಡರು ಅಂಬಾನಿ ಮತ್ತು ಅದಾನಿ ವಿರುದ್ಧ ಆರೋಪಿಸುವುದನ್ನು ನಿಲ್ಲಿಸಿದ್ದರು. ಯಾಕೆ? ಇದನ್ನು ಕಾಂಗ್ರೆಸ್ ನ ಶೆಹಝಾದೆಗೆ ಕೇಳಬೇಕು, ಅಂಬಾನಿ, ಅದಾನಿಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ಈ ಚುನಾವಣೆಗೆ ಅವರಿಂದ ಕಾಂಗ್ರೆಸ್ ಎಷ್ಟು ಮಾಲು ಪಡೆದಿದೆ ಎಂದು ಕಾಂಗ್ರೆಸ್ ಜನರಿಗೆ ಸ್ಪಷ್ಟಪಡಿಸಬೇಕು ಎಂದು ತಿರುಗೇಟು ನೀಡಿದ್ದಾರೆ.
ತೆಲಂಗಾಣದಿಂದ ದಿಲ್ಲಿವರೆಗೂ ಡಬ್ಬಲ್ ಆರ್ ತೆರಿಗೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ತೆಲುಗಿನಲ್ಲಿ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗಿತ್ತು. ಅದು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಅದೇನೆ ಇರಲಿ, ನನಗೆ ಕೆಲವರು ಡಬ್ಬಲ್ ಆರ್ ಬಗ್ಗೆ ಹೇಳಿದ್ದರು. ಇದು ವಸೂಲಿ ಹಾಗಾಗಿ ಆರ್ ಆರ್ ಆರ್(ಬಾಕ್ಸ್ ಆಫೀಸ್). ಕೆಲವೇ ದಿನಗಳಲ್ಲಿ ಡಬ್ಬಲ್ ಆರ್ ಕೋಟಿಗಟ್ಟಲೇ ಹಣ ವಸೂಲಿ ಮಾಡಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.