Advertisement

ಬನ್ನಿ ನಿಮ್ಮ ಒಂದು ರೂಪಾಯಿ ತೆಗೆದುಕೊಂಡು ಹೋಗಿ

09:42 AM Aug 08, 2019 | Hari Prasad |

ಹೊಸದಿಲ್ಲಿ: ಗೂಢಚಾರಿಕೆ ನಡೆಸುತ್ತಿದ್ದ ಆರೋಪದಡಿ ಗಲ್ಲುಶಿಕ್ಷೆಗೆ ಒಳಗಾಗಿದ್ದ ಭಾರತದ ನೌಕಾಪಡೆ ಮಾಜೀ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರ ಗಲ್ಲುಶಿಕ್ಷೆ ರದ್ದತಿ, ಹೈಕಮಿಷನರ್ ಭೇಟಿಗೆ ಅವಕಾಶ ನೀಡುವ ಕುರಿತಾಗಿ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿದ್ದ ಖ್ಯಾತ ವಕೀಲ ಹರೀಶ್ ಸಾಳ್ವೆ ಅವರೊಂದಿಗೆ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನರಾಗುವ ಕೆಲವೇ ಗಂಟೆಗಳ ಮೊದಲು ಮಾತನಾಡಿದ್ದರಂತೆ.

Advertisement

ಈ ವಿಷಯವನ್ನು ಖುದ್ದು ಹರೀಶ್ ಸಾಳ್ವೆ ಅವರೇ ಟೈಮ್ಸ್ ನೌ ವಾಹಿನಿಯಲ್ಲಿ ಹೇಳಿಕೊಂಡಿದ್ದಾರೆ. ಮಂಗಳವಾರ ರಾತ್ರಿ 8.50ರ ಹೊತ್ತಿಗೆ ಫೋನ್ ಮಾಡಿದಾಗ ಅವರು ಭಾವನಾತ್ಮಕವಾಗಿ ತುಂಬಾ ಮಾತನಾಡಿದರು. ಅಷ್ಟೇ ಅಲ್ಲ, ‘ನಿಮ್ಮನ್ನೊಮ್ಮೆ ಭೇಟಿ ಮಾಡಬೇಕು. ಅಲ್ಲದೇ ಜಾಧವ್ ಪ್ರಕರಣದಲ್ಲಿ ತಾವು ವಾದಿಸಿದ್ದಕ್ಕಾಗಿ ನೀವು ಇಚ್ಛೆಪಟ್ಟಂತೆ 1 ರೂಪಾಯಿ ಫೀಸನ್ನು ಕೊಡಬೇಕಿದೆ. ಬನ್ನಿ ಅದನ್ನುತೆಗೆದುಕೊಂಡು ಹೋಗಿ…’ ಎಂದು ಹೇಳಿದ್ದರು ಎಂದು ಸಾಳ್ವೆ ಹೇಳಿದ್ದಾರೆ.

ಜಾಧವ್ ಪ್ರಕರಣದಲ್ಲಿ ಭಾರತದ ಪರ ವಾದ ಮಾಡಲು ಸಾಳ್ವೆ ಅವರು ಕೇವಲ 1 ರೂಪಾಯಿ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಜಾಧವ್ ಪ್ರಕರಣವನ್ನು ಸುಷ್ಮಾ ಅವರು ಖುದ್ದು ನೋಡುತ್ತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕ್‌ ಕುರಿತಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳಲು ಶ್ರಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next