Advertisement

ಮಹಿಳೆಯರ ಲೈಂಗಿಕ ಸಮ್ಮತಿ ವಯಸ್ಸು 16ಕ್ಕೆ ಇಳಿಸಿ : ಕೇಂದ್ರಕ್ಕೆ ಮ.ಪ್ರ ಹೈಕೋರ್ಟ್‌ ಮನವಿ

10:23 PM Jul 01, 2023 | Team Udayavani |

ಭೋಪಾಲ್‌: ದೇಶದಲ್ಲಿ ಹೆಣ್ಣು ಮಕ್ಕಳಿಗೆ ಲೈಂಗಿಕ ಸಮ್ಮತಿ ವಯಸ್ಸನ್ನು ಹಾಲಿ 18ರಿಂದ 16ಕ್ಕೆ ಇಳಿಕೆ ಮಾಡುವಂತೆ ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್‌ ಪೀಠ ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿದೆ. ಸದ್ಯದ ವಯೋಮಿತಿಯ ಕಾನೂನು ವ್ಯವಸ್ಥೆಯಿಂದಾಗಿ ಹದಿಹರೆಯದ ಬಾಲಕರಿಗೆ ಸಾಮಾಜಿಕ ವ್ಯವಸ್ಥೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ನ್ಯಾ.ದೀಪಕ್‌ ಕುಮಾರ್‌ ಅಗರ್ವಾಲ್‌ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Advertisement

2020ರಲ್ಲಿ ಅಪ್ರಾಪ್ತೆಯ ಮೇಲೆ ಪದೇ ಪದೆ ಅತ್ಯಾಚಾರವೆಸಗಿ, ಆಕೆ ಗರ್ಭಧರಿಸಿದ್ದಳೆಂಬ ಆರೋಪದ ಮೇರೆಗೆ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಸದರಿ ಕೇಸಿನ ಎಫ್ಐಆರ್‌ ಅನ್ನು ಜೂ.27ರಂದು ನ್ಯಾಯಪೀಠ ರದ್ದುಗೊಳಿಸಿತ್ತು.

ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ “ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಹುಡುಗ, ಹುಡುಗಿಯರು ಬೇಗನೇ ಪ್ರೌಢಾವಸ್ಥೆಗೆ ಬರುತ್ತಾರೆ. ಜತೆಗೆ ಜಾಲತಾಣಗಳ ಪ್ರಭಾವದಿಂದಲೋ, ಸುಲಭವಾಗಿ ದೊರೆಯುತ್ತಿರುವ ಅಂತರ್ಜಾಲ ಸೇವೆಗಳ ದುರುಪಯೋಗದಿಂದಲೋ ಅವರು ಆಕರ್ಷಿತರಾಗಿ, ಒಮ್ಮತ ದೈಹಿಕ ಸಂಬಂಧದ ವರೆಗೂ ಮುಂದುವರಿಯುತ್ತಿದ್ದಾರೆ. ನಂತರ ಹುಡುಗರ ಮೇಲೆ ಲೈಂಗಿಕದೌರ್ಜನ್ಯದ ಆರೋಪಗಳು ಬರುತ್ತಿವೆ. ಈ ಹಿನ್ನೆಲೆ ಹದಿಹರೆಯದವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಪರಿಗಣಿಸಿ, ಲೈಂಗಿಕ ಸಮ್ಮತಿ ವಯೋಮಿತಿಯನ್ನು 18ರಿಂದ 16ಕ್ಕೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ನ್ಯಾಯಪೀಠ ಹೇಳಿತು.

 

Advertisement

Udayavani is now on Telegram. Click here to join our channel and stay updated with the latest news.

Next