Advertisement

10 ವರ್ಷ ಕಳೆದರೂ ಐಪಿಎಲ್‌ ವೇತನ ಸಿಕ್ಕಿಲ್ಲ: ಬ್ರಾಡ್‌ ಹಾಜ್‌ ಆರೋಪ

11:42 PM May 25, 2021 | Team Udayavani |

ಸಿಡ್ನಿ : ಬಿಸಿಸಿಐಯಿಂದ ತನಗೆ ಬರಬೇಕಾದ ಐಪಿಎಲ್‌ ವೇತನ 10 ವರ್ಷ ಕಳೆದರೂ ಸಿಕ್ಕಿಲ್ಲ ಎಂದು ಆಸ್ಟ್ರೇಲಿಯದ ಮಾಜಿ ಆಟಗಾರ ಬ್ರಾಡ್‌ ಹಾಜ್‌ ಗಂಭೀರ ಆರೋಪ ಮಾಡಿದ್ದಾರೆ.

Advertisement

ಕಳೆದ ವರ್ಷ ನಡೆದ ಐಸಿಸಿ ಮಹಿಳಾ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ರನ್ನರ್ ಅಪ್‌ ಭಾರತಕ್ಕೆ ಬಹುಮಾನ ಮೊತ್ತ ಇನ್ನೂ ಲಭ್ಯವಾಗಿಲ್ಲ ಎಂಬ ಆರೋಪವನ್ನು ಬಿಸಿಸಿಐ ಈಗಾಗಲೇ ಎದುರಿಸುತ್ತಿದೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಬ್ರಾಡ್‌ ಹಾಜ್‌, ಬಾಕಿ ಉಳಿದಿರುವ ಶೇ. 35 ರಷ್ಟು ವೇತನ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಬಿಸಿಸಿಐಗೆ ಮಾಹಿತಿ ಯಾದರೂ ಇದೆಯೇ ಎಂದು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ :ನಿಯಮ ಉಲ್ಲಂಘನೆ : ಪಾಕಿಸ್ಥಾನ್‌ ಸೂಪರ್‌ ಲೀಗ್‌ನಿಂದ ನಸೀಮ್‌ಗೆ ಗೇಟ್‌ಪಾಸ್‌

“ಐಪಿಎಲ್‌ನಲ್ಲಿ ಕೊಚ್ಚಿ ಟಸ್ಕರ್ಸ್‌ ಕೇರಳ ತಂಡವನ್ನು ಪ್ರತಿ ನಿಧಿಸಿ 10 ವರ್ಷ ಕಳೆದರೂ ಶೇ. 35 ರಷ್ಟು ವೇತನ ಲಭ್ಯವಾಗಿಲ್ಲ. ನನ್ನ ಹಣ ಎಲ್ಲಿದೆ ಎಂದು ಪತ್ತೆ ಮಾಡಲು ಬಿಸಿಸಿಐನಿಂದ ಸಾಧ್ಯವೆ’ ಎಂದು ಹಾಜ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next