Advertisement
ಪ್ರತಿ ವರ್ಷ ಕಪ್ ಗೆಲ್ಲಲೇ ಬೇಕೆಂಬ ಆಲೋಚನೆಯೊಂದಿಗೆ ಬಲಿಷ್ಟ ತಂಡವನ್ನೇ ಕಟ್ಟುವ ರಾಯಲ್ ಚಾಲೆಂಜ್ ಬೆಂಗಳೂರು ಫ್ರಾಂಚೈಸಿ ಈ ಬಾರಿಯೂ ಉತ್ತಮ ಆಟಗಾರರತ್ತ ಕಣ್ಣಿಟ್ಟಿದೆ.
Related Articles
Advertisement
ಗ್ಲೆನ್ ಮ್ಯಾಕ್ಸವೆಲ್ಆಸ್ಟ್ರೇಲಿಯಾದ ಬಲಿಷ್ಠ ಆಟಗಾರ ಗ್ಲೆನ್ ಮ್ಯಾಕ್ಸವೆಲ್. ಹೊಡೆಬಡಿ ಕೂಟಕ್ಕೆ ಹೇಳಿ ಮಾಡಿಸಿದಂತಹ ಶೈಲಿಯ ಗ್ಲೆನ್ ತನ್ನ ಬ್ಯಾಟಿಂಗ್ ನಿಂದ ಪಂದ್ಯದ ಚಿತ್ರಣವನ್ನೇ ಬದಲಿಸಬಲ್ಲಾತ. ಆರ್ ಸಿಬಿಯ ವಿರಾಟ್, ಡಿವಿಲಿಯರ್ಸ್ ನಂತರ ಬ್ಯಾಟಿಂಗ್ ಗೆ ಸರಿಯಾದ ಆಟಗಾರನನ್ನು ಹುಡುಕುತ್ತಿರುವ ಆರ್ ಸಿಬಿಗೆ ಮ್ಯಾಕ್ಸ ವೆಲ್ ಸರಿಯಾಗಿ ಫಿಟ್ ಆಗಬಹುದು. ಸ್ಪಿನ್ ಬೌಲಿಂಗ್ ಮಾಡಬಲ್ಲವನಾದ ಕಾರಣ ಉತ್ತಮ ಆಲ್ ರೌಂಡರ್ ಆಗಿ, ಕೊನೆಯ ಓವರ್ ಗಳಲ್ಲಿ ಹೊಡೆಬಡಿಯ ಆಟದಿಂದ ಫಿನಿಶರ್ ಆಗಿ ಆಡಬಹುದು. ರಾಬಿನ್ ಉತ್ತಪ್ಪ
ಈ ಹಿಂದೆ ಆರ್ ಸಿಬಿ ಪರ ಆಡಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಮತ್ತೆ ತವರು ತಂಡಕ್ಕೆ ಆಡಬಹುದು. ಆರಂಭಿಕ ಆಟಗಾರರಾಗಿ ದೇವದತ್ತ ಪಡಿಕ್ಕಲ್ ಮತ್ತು ಪಾರ್ಥೀವ್ ಪಟೇಲ್ ತಂಡದಲ್ಲಿದ್ದರೂ ಇಬ್ಬರೂ ಎಡಗೈ ದಾಂಡಿಗರಾಗಿರುವ ಕಾರಣ ಫ್ರಾಂಚೈಸಿ ಉತ್ತಪ್ಪ ಕಡೆಗೆ ಮನಸ್ಸು ಮಾಡಬಹುದು. ರಾಬಿನ್ ಕೀಪರ್ ಕೂಡಾ ಆಗಿರುವುದು ಒಂದು ಅನುಕೂಲ. ಚಿನ್ನಸ್ವಾಮಿ ಅಂಗಳದ ಬಗ್ಗೆ ಚೆನ್ನಾಗಿ ಬಲ್ಲ ಉತ್ತಪ್ಪ ಆರ್ ಸಿಬಿಗೆ ಪ್ಲಸ್ ಆಗಬಹುದು. ಪ್ಯಾಟ್ ಕಮಿನ್ಸ್
ಆಸ್ಟ್ರೇಲಿಯಾದ ಈ ವೇಗಿಯನ್ನು ಆರ್ ಸಿಬಿ ಖರೀದಿಸಿದರೆ ಬೌಲಿಂಗ್ ವಿಭಾಗ ಸದೃಢವಾಗುತ್ತದೆ. ಉಮೇಶ್ ಯಾದವ್, ಸೈನಿ, ಸಿರಾಜ್ ಜೊತೆಗೆ ಅನುಭವಿ ಪ್ಯಾಟ್ ಕಮಿನ್ಸ್ ಸೇರಿದರೆ ವೇಗದ ಬೌಲಿಂಗ್ ಆಟ್ಯಾಕ್ ಇನ್ನಷ್ಟು ಗಟ್ಟಿಯಾಗುತ್ತದೆ. ಕಳೆದ 15 ತಿಂಗಳಿಂದ ಪ್ಯಾಟ್ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಸದ್ಯ ಟೆಸ್ಟ್ ಕ್ರಿಕೆಟ್ ನಲ್ಲಿ ನಂಬರ್ ವನ್ ಬೌಲರ್ ಆಗಿದ್ದಾರೆ. ವಿರಾಟ್ ಪಡೆಗೆ ಕಮಿನ್ಸ್ ಸೇರಿದರೆ ತಂಡದ ಬಲ ಹೆಚ್ಚುವುದಂತೂ ಗ್ಯಾರಂಟಿ.